ದೀಪ ನಮ್ಮನ್ನು ಒಂದು ಮಾಡುತ್ತದೆ ಎಂದರೆ,
ದೀಪ ನಮ್ಮನು ಸಂತಸಪಡಿಸುತ್ತದೆ ಎಂದರೆ,
ದೀಪದ ಆ ಶಕ್ತಿ ನೋಡಿ?
ವರ್ಷದ ಒಂದು ದಿನ ದೀಪಕ್ಕೆ ಮೀಸಲು,
ವರ್ಷಗಟ್ಟಲೆ ರಕ್ಷಿಸಿದ ದೀಪಕ್ಕೆ ಒಂದು ದಿನ ಬೇಡವೇ?
ದೀಪ, ಅಧ್ಯಾತ್ಮದ ಸಂಕೇತ
ಬತ್ತಿ- ತೈಲಗಳನ್ನು ಒಂದು ಮಾಡಿ ಪ್ರಜ್ವಲಿಸುವ ಸೋಜಿಗ!
ಎಲ್ಲ ಧರ್ಮದಲ್ಲೂ ದೀಪಕ್ಕೆ ಮೊದಲ ಸ್ಥಾನ,
ಬೆಳಗುವ ಸತ್ಯಕ್ಕೆ ಬೆಲೆ ಕೊಡದೇ ಬೇರಿನ್ನೇನು ಮಾಡುವುದಿದೆ?
ಎಲ್ಲ ಸತ್ಯಗಳಿಂದ ಮೇಲು, ಎಲ್ಲ ಸತ್ವಗಳಿಂದ ಮೇಲು,
ಎಲ್ಲ ಪ್ರಾಂತಗಳಿಂದ ಮೇಲು, ಎಲ್ಲ ಪಂಥಗಳಿಂದ ಮೇಲು!
ಜಗವ ಬೆಳಗುವ ಸೂರ್ಯ, ಮನೆ ಬೆಳಗುವ ಬಲ್ಬು
ದಾರಿ ತೋರುವ ಹಿಲಾಲು, ಚಕ್ಷು ಬೆಳಗಿಸುವ ದೃಷ್ಟಿ!
ಬೆಳಕಿನ ರೂಪ ಅನೇಕ
ಕಲ್ಲಿನಲ್ಲಿ ಬೆಂಕಿ ಇದೆ ಎಂದರೆ ನಂಬುವಿರ?
ಹೃದಯದಲ್ಲಿ ಶಾಖವಿದೆ ಎಂದರೆ ಒಪ್ಪುವಿರ?
ಇನ್ನೂ ಎಲ್ಲೆಲ್ಲಿ ಬೆಳಕು ಇದೆ ಎಂದು ನನಗೆ ಬರೆದು ಕಳಿಸುವಿರ?

✍️ಶ್ರೀ ಉಮೇಶ ಮುನವಳ್ಳಿ
ಧಾರವಾಡ
