ನಾನು ಏನೆಂದು ಖುಷಿಪಡಲಿ
ನಾನು ಏನೆಂದು ದುಃಖಪಡಲಿ
ಕ್ಷಣ ಕ್ಷಣಕೆ ಸುಖ ದುಃಖಗಳು
ಅದಲಿ ಬದಲಿಯಾಡುವಾಗ….!
ನಿನ್ನೆ ಇದ್ದದ್ದು ಇಂದು ಮಾಯೆ
ಇಂದು ಇರುವುದು ನಾಳೆಗೆ ಹೇಗೋ?
ನಾವು ಮಾತ್ರ ಮರದ ಕೊಂಬೆಗೆ
ಜೋತು ಬೀಳುವ ಬಾವಲಿಗಳ ಹಾಗೆ!
ಆಸೆಯೆಂಬ ಹೊಟ್ಟೆಯಲಿ ಹುಟ್ಟಿರುವೆವು
ದಿನಕೊಂದು ಬೇಡಿಕೆ ಮೊಟ್ಟೆ ಹಾಕಿದ್ದೇ ಸರಿ
ಕ್ಷಣದಲ್ಲಿ ಒಡೆದು ನಿರಾಸೆ ಗಾಳಿ ಹರಡಿ ಮತ್ತೆ
ತಥಾಗತನ ಬಿರುಗಾಳಿಗೆ ಮತ್ತದೇ ದಿವಾಳಿ ಹಾವಳಿ…!
ಬಿಡುಗಡೆ ಮಾತ್ರ ಎಂದಿಗೋ
ಅಂದೇ ನೋಡು ನಿಜವಾದ ದೀಪಾವಳಿ
ಕತ್ತಲು ಓಡಿ ಬೆಳಕು ಮೂಡುವ ಪರಿ
ನಮ್ಮೆಲ್ಲರ ಸುದಿನವಾಗುವ ಸರದಿ…!
✍️ವೇಣು ಜಾಲಿಬೆಂಚಿ
ರಾಯಚೂರು.
