ಎಲ್ಲರಿಗೂ ಹಂಚುತ ಮಾವು
ತಿಂದುಂಡು ನುಂಗಿದೆ ಬೇವು
ವಿಷಕಂಠನಂತೆ ಕುಡಿದೆ ನೋವು
ಎಲ್ಲರ ಪಾಲಿಗೆ ನಾನಾದೆ ಹೂವು.
ಬೆಂಕಿ ಬಲೆ ಬೀಸಿದರೂ ಕಾವು
ನೀಡಿದೆ ಸತ್ಯ ಶಾಂತಿಯ ಸೇವು
ಮಲ್ಲಿಗೆಗೆ ಕಲ್ಲೆರಗಿದರೂ ಜಾವು
ನಾನಾದೆ ಬಣವಿಯ ಮೇವು.
ತಂಪಲ್ಲೂ ಸುಳಿದವು ತೇವು
ಕರಗಿಸಿದೆ ಮೋಡಗಳ ಬಾವು
ಗಾಯದಂತೆ ನೋವುಗಳು ಅವು
ವೈದ್ಯನಾಗಿ ಹೊರ ಹಾಕಿದೆ ಕೀವು.
ಸಿಂಹದಂತೆ ಎರಗಿದರೂ ಸಾವು
ಎಲ್ಲರಲ್ಲೂ ನಾ ಕಂಡೆ ದೇವ್ರು
ಅಂಜಿಸಿ ಬಸ್ಸಿಂದರೂ ಹಾವು
ನಾನಾದೆ ಪುಣ್ಯಕೋಟಿ ಗೋವು.
✍️ರಾಮಚಂದ್ರ ಡಿ ಪತ್ತಾರ
ಶಿಕ್ಷಕರು
ಸ.ಹಿ.ಪ್ರಾ.ಶಾಲೆ ನೇಕಾರ ನಗರ, ಹುಬ್ಬಳ್ಳಿ
