ಮಣ್ಣ ಹಣತೆಯೊಳು, ಕುಂಬಾರನ ಕಸವು
ಹೊಸೆದ ಹತ್ತಿಯೊಳು, ರೈತನ ಇರುವು
ಗಾಣದ ಎಣ್ಣೆಗೆ, ಗಾಣಿಗನ ಒಲವು
ಈ ಮೂವರು ಬ್ರಹ್ಮ ವಿಷ್ಣು ಮಹೇಶ್ವರರು
ಲಕ್ಷ್ಮೀ, ಸರಸ್ವತಿ, ಪಾರ್ವತಿಯರ ರೂಪದ ಜ್ಯೋತಿ
ಈ ಜಗದ ಅಂದಕಾರವ ಹೋಗಲಾಡಿಸಲು
ಬೆಳಗಲಿ, ಈ ಬೆಳಕು, ಹಗಲು, ಇರುಳು….
ಎಣ್ಣೆ ಇರುವಷ್ಟು, ದೀಪದ ಬೆಳಗು……
ಪುಣ್ಯ ಇರುವಷ್ಟು, ಮಾನವನ ಬದುಕು…
ಬತ್ತಿ ಸುಟ್ಟಷ್ಟು…… , ಎಣ್ಣೆ ಹಾಕು….
ಪರರಿಗೆ, ದೇಹ ದುಡಿದಷ್ಟು …ಪುಣ್ಯ ಸಾಕು…
ಪಣತಿ ಬಾಳಿದಷ್ಟು,ಕುಂಬಾರನ, ನೆನಪು
ದೇಹಾತ್ಮ ದಂಡಿಸಿದಷ್ಟು, ದೇವರ ಕೃಪೆ ಕಾಣು…
ಬದುಕಿನ ದೀವಿಗೆ ಬೆಳಗಲಿ,, ನಮಗೂ ನಿಮಗೂ ಎಲ್ಲರಿಗೂ…
ಮನೆಯ ದೀಪ…. ಮನೆಯ ಬೆಳಗಿದರೆ
ತನ್ನ ಅರಿವಿನ ದೀಪ,,ಜಗವ ಬೆಳಗುವುದು
ಎಣ್ಣೆ,ಬತ್ತಿ, ದೀಪ, ಕೆಲ ಸಮಯ ಬೆಳಗಿದರೆ..
ಆಧ್ಯಾತ್ಮದ ಜ್ಯೋತಿ ನಿರಂತರ ಇಹ ಪರವ ಬೆಳಗುವುದು…..
ಈ ದೀಪಾವಳಿಯ, ದೀವಳಿಗೆ, ಮನೆ ಮನ, ಬೆಳಗುವುದು…
ಪ್ರೇಮದೊಲುಮೆಯಲಿ…ದೀಪ.. ಬೆಳಗುವುದು
ದೀಪದೊಲುಮೆಯಲಿ… ಕತ್ತಲು ಕರಗುವುದು….
ನಮ್ಮ ನಿಮ್ಮ ಹಾರೈಕೆಯಲಿ, ಸ್ನೇಹ ವೃದ್ಧಿಸುವುದು.
✍️ ರೇವಣಸಿದ್ದಯ್ಯ ವಿ ಶಿವಪ್ಪಯ್ಯನಮಠ
ಹೂಲಿ ಜಿ: ಬೆಳಗಾವಿ
