ಹಚ್ಚಿಬಿಡಿ ಎಡಬಿಡದೆ
ಬಿಚ್ಚಿಡುತ ಕನಸುಗಳ
ನಾಳೆಗಳ ಭರವಸೆಯ ಬೆಳಕಾಗಿ
ಅರಿವಿನ ಹಣತೆಯ.

ಗರಿಗೆದರಿದ ಬಯಕೆಯಲಿ
ಬೆಂಬಲದ ಸೊಡರಲಿ
ಹೊನಲು ಸೂಸುವ
ಬಾನಹಕ್ಕಿಯ ತೆರದಿ.

ಮೌಢ್ಯಗಳ ಹೊಸಕಿ
ಬಿಗುಮಾನ ಮರೆಸಿ
ಏಕತೆಯ ರೂಪಕೆ
ಪ್ರಖರತೆಯ ಆರತಿಯಲಿ.

ಬಿರುನುಡಿಗೆ ತಾತ್ಸಾರ
ಒಲವ ಸಾರ ಹರಿವಲಿ
ಮಾನವೀಯತೆ ಪ್ರಜ್ವಲಿಸಲು
ಪ್ರೀತಿ ದಣಿವ ತಣಿವ ದೀಪಿಕೆ.

ಮೋಹದ ಬಲೆ ಕಳಚಿ
ವ್ಯಾಮೋಹ ದೂಡಿ
ಸಹಕಾರ ಮಂತ್ರ ಜಪಿಸಿ
ಹಚ್ಚಿಬಿಡಿ ಅರಿವಿನ ಹಣತೆ.

✍️ರೇಷ್ಮಾ ಕಂದಕೂರ
ಶಿಕ್ಷಕಿ, ಸಿಂಧನೂರು