ನೋವು ನಲಿವುಗಳ ಮರೆತು
ಒಳಿತನು ಬಯಸುತಲಿ ಹೊಸತು
ಬೆಳಗಿಸುವ ಹಣತೆಗಳನ್ನು ಜೊತೆಕೂತು
ಧರೆಗಿಳಿಯಲಿ ಆ ಭಗವಂತನೇ ಮನಸೋತು
ಬಣ್ಣಗಳಲ್ಲಿ ಮಿಂದೆದ್ದ ರಂಗೋಲಿಗಳ ಚಿತ್ತಾರ
ನವ ವಧುವನ್ನು ನಾಚಿಸುವ ಗೋವುಗಳ ಸಿಂಗಾರ
ರಂಗು ರಂಗಿನ ತೋರಣಗಳ ವೈಯಾರ
ಕೇಳುತಿದೆ ಗಗನ ಚುಂಬಿಸುವ ಪಟಾಕಿಗಳಬ್ಬರ
ಬಾಳಿನ ಅಂಧಕಾರ ಓಡಿಸುತ್ತ
ವದನದಲಿ ನಗುವ ಮೂಡಿಸುತ್ತ
ದೀಪಗಳಿಂದ ಕಂಗೊಳಿಸುತ್ತ
ಹಬ್ಬದ ಖುಷಿಯ ಉಣಿಸುತ್ತ
ಹೊಸತನ ತಂದ ದೀಪಾವಳಿಗೆ
ಸವಿಹೂರ್ಣದ ಹೋಳಿಗೆ
ಸಂತಸವ ಮೂಡಿಸಿದೆ ಪ್ರತಿಗಳಿಗೆ
ಮನೆಮನಗಳಲ್ಲಿ ಬೆಳಗಲಿ ಈ ಜ್ಞಾನ ದೀವಿಗೆ
✍️ಮಹಾಲಕ್ಷ್ಮೀ ಮರಾಠಿ
ಪತ್ರಿಕೋದ್ಯಮ ವಿಭಾಗ
ಎಂ ಎಂ ಕಾಲೇಜು ಶಿರಸಿ
