ದೀಪವೆಂಬ ಬೆಳಕಿನಲ್ಲಿ
ಅರಳಬೇಕು ಜ್ಞಾನಜ್ಯೋತಿ

ನಮ್ಮ ಬಾಳ ಪುಟಗಳಲ್ಲಿ
ಅರಳುತಿರಲಿ ನಿತ್ಯ ದೀಪ್ತಿ
ಹಬ್ಬ ಎಂಬ ಸಂಭ್ರಮದಲಿ

ನಿತ್ಯ ಖುಷಿಯ ಹೊನಲಿನಲ್ಲಿ
ಮೂಡುವುದು ಒಂದು ಕಾವ್ಯ
ಅದುವೆ ನಮ್ಮ ಬಾಳ ಧ್ಯೇಯ

ಹೊತ್ತಲು ದೀಪದ ಬತ್ತಿ
ಎತ್ತೆತ್ತಲೂ ಎಣ್ಣೆಯ ಕಂಪು
ಆಗಲಿ ಅನುದಿನವೂ ಹಬ್ಬ
ಮೂಡಲಿ ಅನುದಿನವೂ ಖುಷಿ

✍️ಸತೀಶ್ ಕಂಚೀಪಾಲ್
ಯಲ್ಲಾಪೂರ