ನಡುಮನೆಯ ನಡುವಲ್ಲಿ
ಹೊಸ ದೀಪ ಉರಿಯುತಿದೆ
ಸುತ್ತಲಿನ ಕತ್ತಲೆಗೆ ಸ್ವತ್ತಾಗಿ ನಿಂತಿದೆ
ಕರೆಯುತಿದೆ, ಕೂಗುತಿದೆ ಮತ್ತೆ ಮತ್ತೆ ಹೇಳುತ್ತಿದೆ
ಹಣತೆ ಹಚ್ಚಿ
ದೀಪಾವಳಿ ಮರಳಿ ಬಂದಿದೆ
ಹೊಸತನದ ಮೆರಗಿಗೆ ಮತ್ತೊಂದು ಬತ್ತಿ ಇಟ್ಟು..
ಹಸುಗಳನು ಪೂಜಿಸುವ
ಹರುಷವನ್ನು ಕೈಲಿ ಹಿಡಿದು
ಬೆಡಗು ಭಿನ್ನಾಣದ ನಡುವೆ
ಪರಪರೆಯ ಉಳಿಸುತಿದೆ..
ಮಂಗಳವ ಮೊಳಗಿಸಲು
ದೀಪಾವಳಿ ಮರಳಿ ಬಂದಿದೆ.
ನರಕಾಸುರನ ಕಥೆಯನ್ನು
ಮತ್ತೊಮ್ಮೆ ನೆನಪಿಸುತ..
ಸಮುದ್ರ ಮಥನದ ಕಥೆ ಕೇಳಿ
ಲಕ್ಷ್ಮಿಯನು ಪ್ರಾರ್ಥಿಸುತ.
ಶ್ರೀರಾಮ ತಿರುಗಿ ಬಂದ ಧರ್ಮ ಗೆದ್ದ ಕಥೆಯ ಹೇಳುತಿದೆ.
ಅಂಧಕಾರದ ಕತ್ತಲೆ ಓಡಿಸಲು
ದೀಪಾವಳಿ ಮರಳಿ ಬಂದಿದೆ.
ಶತ ಶತಮಾನಗಳುರುಳಿ
ಕಾಲ ಸೆವೆದು ಹೋದರೂ
ಆಡಂಬರದ ದಿಬ್ಬಣಕ್ಕೆ ಪಟಾಕಿ
ಬೆಲೆಯ ತೆತ್ತರೂ
ಸಂಸ್ಕೃತಿ ಬಿಡದೇ ದೀಪಾವಳಿ ಅರಳಿ ನಿಂತಿದೆ.
ಮನೆಯ ಬೆಳಗುವ ಪುಟ್ಟ ಜ್ಯೋತಿಯ ನಿರೀಕ್ಷೆಯಲ್ಲಿ
ದೀಪಾವಳಿ ಮರಳಿ ಬಂದಿದೆ
✍️ಶಿಲ್ಪಾ ಪೂಜಾರಿ
ಪತ್ರಿಕೋದ್ಯಮ ವಿಭಾಗ
(BA 2 nd)
ಎಂ.ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ ಶಿರಸಿ
