ಮಬ್ಬು ಕವಿದರೇನು
ಹಬ್ಬುವ ಬಯಕೆಗೆ
ನಡೆಯಿರಲಿ ದಿಗಂತದೆಡೆ
ಮೂಡಣ ರಂಗೇರುವುದಕೆ.
ಭರವಸೆಯ ಚಿಗುರಿರಲಿ
ಉದುರಿ ಹೋದರೇನು ಹಣ್ಣೆಲೆ
ಹಾತೊರೆದುಬಿಡು ನಭದೆಡೆ
ನಂಬಿಕೆಯ ಹೊಸ್ತಿಲಲಿ.
ಯುಗ ಉರುಳಿದರೇನು
ಪ್ರಯತ್ನವಿರಲಿ ಅನವರತ
ಹಗಲಿರುಳಿನ ಋತುಚಕ್ರದಿ
ಅರಳಿ ನಿಲ್ಲಲಿ ಹೂಗಳ ಚೆಲುವು.
ತಬ್ಬಿ ಬಿಡೊಮ್ಮೆ
ಜರಿದವರ ಸರಿಸದೇ
ಹೆಬ್ಬಯಕೆ ಹೊತ್ತು
ಮಬ್ಬು ಸರಿಸಿಬಿಡು.
✍️ರೇಷ್ಮಾ ಕಂದಕೂರ
ಶಿಕ್ಷಕಿ , ಸಿಂಧನೂರು
