ನಗಬೇಕು ನಗಬೇಕು ನಾಳೆಯೆಂಬುದಿದೆಯೊ ಇಲ್ಲವೊ
ಇಂದೇ ಎಲ್ಲ ಕೊಟ್ಟು ಹೋಗಬೇಕು
ಇರಬೇಕು ಇರಬೇಕು ಭವಿಷ್ಯವೆಂಬುದಿದೆಯೊ ಇಲ್ಲವೊ
ಇಂದೇ ಎಲ್ಲ ಕೊಟ್ಟು ಹೋಗಬೇಕು

ಕೆಲವಕ್ಕೆ ಕಾರಣ ಇರುವುದಿಲ್ಲ ಎಷ್ಟಂತ ಯೋಚನೆ ಮಾಡಿದರೂ ಬಗೆಹರಿಯುವುದಿಲ್ಲ
ನಾನು ನೀನು ಅಷ್ಟೇ ಇಲ್ಲಿ ದಿಟವೆಂಬುದಿದೆಯೊ ಇಲ್ಲವೊ
ಇಂದೇ ಎಲ್ಲ ಕೊಟ್ಟು ಹೋಗಬೇಕು

ನಡೆಯಬೇಕು ಗುರಿಮುಟ್ಟುವವರೆಗೂ ಸಾಗುತಲಿರಬೇಕು ಯಾವ ಊರು ಎಲ್ಲಿ ಗಂತವ್ಯ ಗೊತ್ತಿಲ್ಲ
ಪ್ರತೀ ಕಾರಣಕ್ಕೊಂದು ಮರಣವೆಂಬುದಿದೆಯೊ ಇಲ್ಲವೊ ಇಂದೇ ಎಲ್ಲ ಕೊಟ್ಟು ಹೋಗಬೇಕು

ಎಷ್ಟು ಬಡಕೊಂಡರೂ ನಿನ್ನದು ಶುಷ್ಕ ಪಾಂಡಿತ್ಯ ಅನ್ನುವವರೆದೆಯ ಎಲುಬು ಚಿನ್ನದ್ದಲ್ಲವಲ್ಲ!
ನಾನೆಂದು ಮೆರೆವಹಂಕಾರಕೆ ಸಾವೆಂಬುದಿದೆಯೊ ಇಲ್ಲವೊ ಇಂದೇ ಎಲ್ಲ ಕೊಟ್ಟು ಹೋಗಬೇಕು

ಜೀವನಪೂರ್ತಿ ನಕ್ಕುಬದುಕಿದವರೇ ಆಗಸದಲಿ ನಲಿವ ತಾರೆಗಳಾದವು ಜಾಲಿ ಸದಾ ಹೊಳುಯುವವು!
ನಗುವೊ ಅಳುವೊ ನಿಯಮವೆಂಬುದಿದೆಯೊ ಇಲ್ಲವೊ ಇಂದೇ ಎಲ್ಲ ಕೊಟ್ಟು ಹೋಗಬೇಕು

✍️ವೇಣು ಜಾಲಿಬೆಂಚಿ
ರಾಯಚೂರು.