ತೆರೆದ ಕಂಗಳಲಿ ಅಂಬೇ ನೀನಿರುವೆ
ಮುಚ್ಚಿದ ಕಂಗಳಲೂ ಕಾಣುತಿರುವೆ
ಕರವ ಜೋಡಿಸಿ ಶರಣನು ಆಗಿರುವೆ
ಮಾನಸ ಪೂಜೆಯು ನಿನಗಮ್ಮ ಶಿವೇ

ನನ್ನ ಕಣ್ಣಗಲ ನಿನ್ನ ಜಗವು ಅಮ್ಮಾ
ಕಾಣಲೇನು ಬಿಟ್ಟು ನಿನ್ಮೊಗವಮ್ಮಾ
ಕಾಯದಿ ಕಾಯುತಿರುವೆ ನಿನಗಮ್ಮಾ
ಕಣ ಉಸಿರು ಪ್ರಾರ್ಥನೆ ಜಗದಮ್ಮಾ

ನಿನಗೆಂದೇ ಸಜೀವತಪವನು ನಾ ಮಾಡುತ್ತಿರುವೆ
ನಿನ್ನ ಸ್ಮೃತಿಯಲಿ ಸ್ತುತಿಃಜಪವ ನಾ ಹಾಡುತ್ತಿರುವೆ
ಲೀಲಲೋಳಲೆ ಮಗುಮನಕೆ ಏಕೇ ಕಾಡುತ್ತಿರುವೆ
ಕರುಣಮ್ಮಾ ಶ್ರೀಪಾದಮಾತ್ರವ ಬಯಸುತ್ತಿರುವೆ

ವಿರಾಟವು ವಿಶಾಲವು ಅಖಿಲವು ನಿನ್ನ ರೂಪವಮ್ಮಾ
ಆತ್ಮಜ್ಯೋತಿ ಸಹಿತ ಬೆಳಗುವೆನು ಭಾವಧೂಪವಮ್ಮಾ
ಆತ್ಮಬಿಂದುವಿಗೆ ಕೃಪಾಸಿಂಧುವೇ ದಯೆ ತೋರಮ್ಮಾ
ನಾನಿಲ್ಲದ ನನ್ನ ನೀನು ಸ್ವೀಕರಿಸಿ ಸಂಭ್ರಮಿಸು ಅಮ್ಮಾ

✍️ ಕಾವ್ಯಸುತ 
(ಷಣ್ಮುಗಂ ವಿವೇಕಾನಂದ)
ಧಾರವಾಡ