ಸದ್ದು ಗದ್ದಲಗಳಿಲ್ಲದ
ಪ್ರತಿಯೊಂದಕ್ಕೂ ಆಕ್ಷೇಪಣೆ ಮಾಡದ
ಮನೆ ಮಾಲೀಕರು ಹತ್ತಿರವಿಲ್ಲದ
ಮನೆಯೊಂದು ಬೇಕಾಗಿದೆ ಹುಡುಕಿ ಕೊಡಿ

ಇರುವುದರಲ್ಲೇ ತೃಪ್ತಿ ಪಡುವ
ಬೇರೆಯವರ ಬಗ್ಗೆ ಮತ್ಸರ ಪಡದ
ಮಾನವೀಯತೆಯನ್ನು ಉಳಿಸಿಕೊಂಡಿರುವ
ನಾಗರೀಕರು ಬೇಕಾಗಿದ್ದಾರೆ ಹುಡುಕಿ ಕೊಡಿ

ಇದ್ದಾಗ ಕಡೆಗಣಿಸಿ
ಕಣ್ಮರೆಯಾದಾಗ ಕೃತಕ ಪ್ರೀತಿ ತೋರದ
ಬದುಕಿನುದ್ದಕ್ಕೂ ನುಡಿದಂತೆ ನಡೆಯುವ
ನಡೆದಂತೆ ನುಡಿಯುವ ಮಾನವರ ಹುಡುಕಿ ಕೊಡಿ

ತನ್ನ ಕಾಯಕವ ಪ್ರಾಮಾಣಿಕವಾಗಿ ಮಾಡುವ
ಯಾರಿಗೂ ಕೆಡಕನ್ನು ಬಯಸದ
ಮತ ಭೇದ ಭಾವ ಮಾಡದ
ಸಜ್ಜನರನ್ನು ಕಾಣಬೇಕಾಗಿದೆ ಹುಡುಕಿ ಕೊಡಿ 

     ✍️ರಾಘವೇಂದ್ರ ಸಿ.ಎಸ್
      ಉಪನ್ಯಾಸಕರು
ಶ್ರೀ ರಾಮಕೃಷ್ಣ ವಿದ್ಯಾಶಾಲೆ
ಮೈಸೂರು