ಸಂವಿಧಾನ ಮತ್ತು ಗಜಲ್ ಏನಾದರೂ ಸಾಮ್ಯ ಇದೆಯಾ ಅನ್ನುವ ವಿಚಾರ ಒಮ್ಮೊಮ್ಮೆ ಬರುತ್ತದೆ. ಸಂವಿಧಾನ ಇಲ್ಲದವರ ನೋವುಗಳು, ಇದ್ದದು, ಇಲ್ಲದ್ದು ಅತೀರೇಕ ಅನಿಸಬಹುದಾದ ಪ್ರೀತಿ ಪ್ರೇಮ, ಭಕ್ತಿ, ಶೃಂಗಾರ ಎಲ್ಲಾಕ್ಕು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವೈವಿಧ್ಯೆತೆ ತರುತ್ತ, ವಾಮನ ಹೆಜ್ಜೆ ಇಡುತ್ತ ಇರುವಾಗ ಬಲಿ ಚಕ್ರವರ್ತಿ ಇನ್ನೂ ಕಣ್ಣಿಗೆ ಬಿದ್ದಿಲ್ಲ. ಎಲ್ಲ ಬಾಷೆಗಳಲ್ಲಿ ಗಜಲ್ ಇದ್ದರೂ ಕೂಡಾ ಹಿಂದಿ,ಉರ್ದು ಗಂಗೆಯಮುನೆ ಯರ ಹಾಗಿದ್ದರೂ ನರ್ಮದೆಯ ದಿಕ್ಕು ದೇಶೆಗಳ ಹಾಗೆ ಭಿನ್ನವಾದ ಪಥ ಅನುಸರಿಸುತ್ತ ಇದೆ.

“ಗಾಲಿಬ್ ನಿನಗೊಂದು ಸಲಾಂ” ಗಜಲ್ ಪುಸ್ತಕ ಹಲವು ಬಳ್ಳಿಯ ಜೀವನಗಳನ್ನು ತನ್ನ ಕರಳು ಬಳ್ಳಿ ಹೊರಗೆ ಭಿನ್ನ ದಿಕ್ಕು ಕನ್ನಡದ ಮನೆ ಮನ ಗಳಲ್ಲಿ ಪಡಿತಾ ಇರೋದು ಸಾಹಿತ್ಯ ಆಸಕ್ತರಿಗೆ ಬೆರಗು ಪಡಿಸುವ, ಮೆರುಗು ಮೂಡಿಸುವ, ನವಿರಾದ ಚಿಗುರು,ನಿಗರು ಭಾವನೆ ಮೂಡಿಸುತ್ತ ರೋಮಾಂಚನ, ನೋವು ನೀಡುವ ನೈಸ್ ಅನ್ನುವ ತರಂಗ ಅಂತರಗಳಿಂದ ಹೃದಯಕ್ಕೆ ಸುರಂಗ ನಿರ್ಮಿಸಿ ಲಗ್ಗೆ ಹಾಕುವ ವಿಧ ವಿಧ ಗಜಲ್ ಗಮ್ಮತ್ತೇ ಬೇರೆ.

ಈ ಪುಸ್ತಕದ ವೈಶಿಷ್ಟ ಎಂದರೆ ಇದೊಂದು ಗಜಲ್ ಜಗತ್ತಿಗೆ ಪ್ರವೇಶಿಸಲು ಒಂದು ಕೀ ಆಗಿದೆ. ಶಾಹಿರಿ, ಗಜಲ್ ಗಳ ವ್ಯಾಕರಣವನ್ನು ಹಸಿದ ಮನಸುಗಳಿಗೆ ಹೊಸ ಕನ್ನಡ ಸಾಹಿತ್ಯದ ಸಿಕರಣಿ ಉಣಬಡಿಸುತ್ತದೆ. ನವಿರಾದ ಭಾವಗಳೇ ಇಲ್ಲಿ ಮನಸುಗಳಿಗೆ ಸಂಕೋಲೆ ಹಾಕುವ ಸಾಮರ್ಥ್ಯವನ್ನು ಎಲ್ಲ ಗಜಲ್ ಗಳು ಹೊಂದಿದ್ದು, ಅವು ತಂತಿ ಮೀಟಿದ ತರಂಗದಂತೆ ಯಾವಾಗಲೂ ಕಿವಿಗಳಲ್ಲಿ ಗುಂಜಾಯಿಸುತ್ತವೆ. ಅಮಲು ಏರಿಸುವ ಘಮಲು ಎಲ್ಲ ತುಮುಲ ಗಳನ್ನ ಕಡಿಮೆ ಮಾಡಿಕೊಳ್ಳಲು ಈ ಗಜಲ್ ಗಳನ್ನ ಓದಲೇಬೇಕು. ಅದೂ ಹೃದಯಕ್ಕೆ, ಅಂತರಂಗಕ್ಕೆ ಕೇಳಿಸುವ ಹಾಗೆ. ಅದೂ ಆಗದಿದ್ದರೆ ಸಂಬಂಧ ಪಟ್ಟ ಗೋಷ್ಠಿಗಳಲ್ಲಿ ಕೇಳುವದು ಬಹುಶ ಆಗ ಈಗ ನಾವು ಬಾರಿ ಬಾರಿ ನೋಡುತ್ತಿರುವ, ಕೇಳುತ್ತಿರುವ ಹಾಸ್ಯ ಗೋಷ್ಠಿಗಳನ್ನ ಬದಿಗೆ ಸರಿಸುವದೂ ಆಗಬಹುದು. ಆದರೆ ಬದಿಗೆ ಯಾಕೆ ಕಷ್ಟಗಳನ್ನು, ದುಃಖ ಮರೆಯಲು ಗಜಲ್ ಮತ್ತು ಹಾಸ್ಯ ಎರಡೂ ಬೇಕು ಅನ್ನುವದು ಜೀವನದ ಅವಶ್ಯಕತೆ.