ಸಾಧನೆಯ ಹಾದಿಯಲಿ ತೊಡಕಿಹುದಿಲ್ಲಿ ಅನೇಕ
ಅಧಿಗಮಿಸಿ ನಡೆಯುತಿರೆ ತೋರುವುದು ಪ್ರತ್ಯೇಕ
ಸರಿ ಗುರಿಯನು ನಿಗದಿಸಿ ಸಾಗುತಿರೆ ನಿರ್ಣಾಯಕ
ಸಹನೆಯ ಮನಸ್ಥಿತಿಯು ಜೊತೆಗಿದ್ದರೆ ಸಹಾಯಕ
ತುಡಿತವು ಮನದಿ ಮಿಡಿದರೆ ಸರಿಯಾಗಿ ಜೋಡಿಸಿ
ಸಂಕುಚಿತ ಭಾವವ ತೊರೆಯುತಾ ಪ್ರಸ್ತುತಿ ಪಡಿಸಿ
ಭಯವನು ಪಡದೆ ತೊಡಕಿನ ಪರದೆಯನು ಸರಿಸಿ
ಪ್ರಯತ್ನವ ಬಿಡದೇ ಗೆಲುವಿನೆಡೆ ಕಾಯಕ ಸೇರಿಸಿ
ಸೋಲು ಗೆಲುವು ಎರಡೂ ಉತ್ಸಾಹ ಹೆಚ್ಚಿಸುವುದು
ಸೋತರೆ ಗೆಲುವಿನ ಛಲ ಮನದಲಿ ಮೂಡುವುದು
ಗೆಲುವು ದೊರೆತರೆ ಮುಂದಿನ ಹೆಜ್ಜೆಗೆ ತಪಿಸುವುದು
ಹಾದೀಲಿ ಏಳುಬೀಳು ಸಹಜ ಸಾಧಿಸಿ ತೋರುವುದು

✍️ ಡಾ. ವಾಣಿಶ್ರೀ ಕಾಸರಗೋಡು
(ಗಡಿನಾಡ ಕನ್ನಡತಿ)
