ಶ್ರಾವಣದ ಸೊಬಗೇ ಸೊಬಗು
ಅದಕೇ ಅದರದೇ ಆದ ಬೆಡಗು
ಹಬ್ಬ ಹರಿದಿನಗಳ ಮೆರಗು
ಸವಿ ಸಂಪ್ರದಾಯಗಳ ಮಿನುಗು

ಆಶೀರ್ವದಿಸಲೆಂದೇ ಇರುವರು ಬರುವರು ಶ್ರೀನಾಗ, ಗಣೇಶ, ಶ್ರೀಕೃಷ್ಣರು
ಪೂಜ್ಯ ಗುರು ರಾಘವೇಂದ್ರರು
ತವರಿಗೆ ತಮ್ಮ ತಮ್ಮ ಅಕ್ಕ ತಂಗಿಯರು
ರಕ್ಷಾ ಬಂಧನದಿ ಶುಭ ಕೊರುವವರು
ಶ್ರಾವಣದ ಶ್ರವಣಿ ಗಾಯತ್ರಿ ಜಪಿಸುವವರು

ಬಂದಿದೆ ಶುಭ ಶ್ರಾವಣಾ
ಕಟ್ಟಿದೆ ಹಬ್ಬಗಳಿಗೆ ತೋರಣ
ಎಲ್ಲೆಲ್ಲೂ ಮನಗಳಾಗಿ ಓರಣ
ಸಂಭ್ರಮದ ಸಂಚಲನ, ಸಂಹವನ

ಶಿವನಾಮ ಶ್ರವಣ ಪ್ರಾರ್ಥನ, ಪರಮ ಪಾವನ
ಶ್ರಾವಣದ ಸುಧಾ ಪಾನ, ಪ್ರತಿ ಭಕುತನ
ಇರಬೇಕು, ಮೊದಲು ಸುಮನ
ಆಗ ಸಾರ್ಥಕ ಮಾಸದಿ ಶ್ರಾವಣ

ವರ ಕವಿ ಬೇಂದ್ರೆಯವರ
ಭಾವಗವನಗಳ ದಿಟ ಮಾಡಲು
ಶ್ರಾವಣ ಸಂವಿಧಾನದ ಸೊಬಗು ತಿಳಿಯಲು
ಭಾರತೀಯರು ಸದಾ ಮುಂದಿನ ಸಾಲು
ಸಂತೃಪ್ತಿಯೇ ತಲ ಬಾಗಿಲು

ನಾವು ಧನ್ಯರು, ಧನ್ಯರು ಶ್ರಾವಣ ಸೌರಭಕೆ ತಲೆ ಬಾಗಿ ವಂದಿಸಲು
ಶ್ರಾವಣದ ಸೋಮವಾರ
ಬಿಲ್ವ ಪ್ರಿಯ ಶಿವನ ಚಂದ್ರವಾರ
ಶುಭ ಶುಕ್ರ, ಶನಿವಾರ
ತಾಯಿ ಲಕುಮಿಯ ಶುಭ ವಾರ
ಶ್ರಾವಣದ ಪ್ರತಿ ದಿನ, ಪ್ರತಿ ವಾರ ಶುಭ ತರುವ ವಾರ.
ತಮ್ಮೆಲ್ಲರಿಗೂ ನಮಸ್ಕಾರ

ಶ್ರೀ ಆರ್.ಪಿ.ಕುಲಕರ್ಣಿ
ರೋಣ ರಾಜೂರ.