ಆ ದಿನದೊಲುಮೆಯಲಿ ಶ್ರಾವಣದ ಸ್ನೇಹ ಬಂಧ
ಇಂದು ಮುಂದೊಲುಮೆಯಲಿ ಸಾಹಿತ್ಯದ ಅನುಬಂಧ
ಶ್ರಾವಣ, ತಾಯಿಯ ಹಾಗೆ, ಹಿಡಿದಿದೆ ನಮ್ಮ ಕರಬಂಧ
ಉಳಿಯಲಿ ಬೆಳೆಯಲಿ ಸ್ನೇಹ ಶ್ರಾವಣದ
ಋಣಾನುಬಂಧ……
ಹೊಸ ಲೇಖನಿ, ಹೊಸ ಕಲ್ಪನೆಗೆ, ವೇದಿಕೆ ನೀ
ನಿನ್ನೊಲುಮೆಗೆ ಒಳಗಾಗಿಸಿಕೊಳ್ಳುವ ಸುಂದರಿ ನೀ
ಅಚ್ಚುಕಟ್ಟುತನದಲಿ ಕಟ್ಟಿದೆ ಸಾಹಿತ್ಯದ ಬುತ್ತಿ ನೀ
ಕವಿಮನಗಳಿಗೆ ಉಣಬಡಿಸುವ ಸಾಹಿತ್ಯದೂಟ ನೀ…
ದಿಗ್ಗದಿಗಂತದಲಿ ಪಸರಿಸಲಿ, ಶ್ರಾವಣ ಸಂಭ್ರಮ
ಬಾನಗಲ, ಭೂವಿಗಲ, ಚಿಮ್ಮಲಿ ಶ್ರಾವಣ ಸಂಭ್ರಮ
ನಿತ್ಯ ನೂರಾರು ಕಥೆ ಕವನ ಬಂದು ಕೂಡುವ ಸಂಗಮ
ರವಿ ಬೆಳಗು, ಶಂಕರನ ಅಭಯ ಸದಾ ಇರುವ ಶ್ರಾವಣ,ನೂರು ಕಾಲ ಬೆಳಗಲಿದರ ಸಂಭ್ರಮ…

ರೇವಣಸಿದ್ದಯ್ಯ.ವಿ. ಶಿವಪೈಯ್ಯನಮಠ
ಹೂಲಿ ಜಿ: ಬೆಳಗಾವಿ
