ಸಾಹಿತ್ಯ ರಂಗದಲ್ಲಿ ರವಿಯೊಂದು ಮೂಡಿದೆ. ತನ್ನ ಆಸಕ್ತ ಗೆಳೆಯರ ಕಿರಣಗಳಿಂದ ಕವಿತೆ, ಲೇಖನಗಳ ಬೆಳಕ ಚೆಲ್ಲುತ್ತಿದೆ. ಕಿರಣಗಳು ಕೈಹಿಡಿದು ಹೊಸ ಲೋಕ ಸೃಷ್ಟಿಸಿವೆ. ಆ ಲೋಕದೊಳಗಡಿಯಿಟ್ಟ ಸಹೃದಯರೇ ಧನ್ಯರು.
ಸ್ನೇಹಿತರೇ, ಕನ್ನಡದ ಕೈಂಕರ್ಯಕ್ಕೆ ಕೊರಳು ನೀಡಿ, ಸಾಹಿತ್ಯದ ನೊಗ ಹೊತ್ತು ಕೃಷಿಯಲ್ಲಿ ತೊಡಗಿರುವ ರವಿಶಂಕರ ಗಡಿಯಪ್ಪನವರ ಅವರ ಉತ್ಸಾಹಕ್ಕೆ, ಆಸಕ್ತಿಗೆ ಸಲಾಂ ಹೇಳಲೇ ಬೇಕು.ಕನ್ನಡವು ಓದುಗರನ್ನು ಕಳೆದುಕೊಳ್ಳುತ್ತಿದೆ ಎನ್ನುವ ಈ ಕಾಲದಲ್ಲಿ ಶ್ರದ್ಧಯಿದ್ದರೆ ಗೆದ್ದೇ ಗೆಲ್ಲುತ್ತೇವೆ ಎಂಬುದನ್ನು ಶ್ರಾವಣ ಬ್ಲಾಗ್ ನ ಮೂಲಕ ಸಾಬೀತು ಮಾಡುತ್ತಿರುವ ರವಿಶಂಕರ್ ಸರ್ ಗೆ ತುಂಬು ಹೃದಯದ ಅಭಿನಂದನೆಗಳು.
ಎಲ್ಲಕ್ಕೂ ಮಿಗಿಲಾಗಿ ಈ ಬ್ಲಾಗ್ ಸಹೃದಯರ ನ್ನೆಲ್ಲಾ ಒಂದು ಮಾಡಿದೆ. ಸಾಹಿತ್ಯ ಪರಿಸರವನ್ನು ಸೃಷ್ಟಿಸಿದೆ. ನನ್ನಂತಹ ಆರಂಭದ ಲೇಖಕಿಗೂ ಮಣೆ ಹಾಕಿ ಸ್ವಾಗತಿಸಿ ಅವಕಾಶ ನೀಡಿದೆ. ಇಲ್ಲಿನ ಎಲ್ಲಾ ಬರಹಗಳೂ ಪ್ರಬುದ್ಧವಾಗಿವೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಕಾವ್ಯ, ಗದ್ಯ, ವೈಚಾರಿಕತೆ ಏನೇ ಇದ್ದರೂ ಅವು ಮೌಲ್ಯಯುತ ವಾಗಿವೆ. ಆಗಾಗ ನಡೆಯುವ ಯಾವುದೇ ಕಾರ್ಯಕ್ರಮವಾದರೂ ಅಚ್ಚುಕಟ್ಟುತನವನ್ನು ಮೆರೆಯುತ್ತವೆ. ಆಕಾಶವಾಣಿಯಲ್ಲಿ ಮೂಡಿ ಬಂದ ಅವರ ಕಾರ್ಯಕ್ರಮಗಳು ಅವರ ಅವಿರತ ಪರಿಶ್ರಮವನ್ನು ಪ್ರತಿಬಿಂಬಿಸಿವೆ. ನಮಗೂ ನಿರಂತರವಾಗಿ ಕೈ ಜೋಡಿಸಲು ಸ್ಫೂರ್ತಿ ನೀಡಿವೆ.
ಒಂದು ಜನಪ್ರಿಯ ಬ್ಲಾಗ್ ನಲ್ಲಿ ಬರೆದು ಜನಪ್ರಿಯತೆ ಪಡೆಯುವುದಕ್ಕಿಂತಲೂ, ಚೆನ್ನಾಗಿ ಬರೆದು ಆ ಬ್ಲಾಗ್ ಅನ್ನು ಜನಪ್ರಿಯಗೊಳಿಸು ವುದು ಶ್ರೇಷ್ಠವಾದುದು. ಅದಕ್ಕೆ ಸಾಕ್ಷಿ ಈ ಎರಡನೆಯ ವಾರ್ಷಿಕೋತ್ಸವ ಸಂಭ್ರಮ. ಈ ಯಶಸ್ಸಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಕಾರಣರಾದ ಶ್ರಾವಣ ಬ್ಲಾಗ್ ನ ಬಳಗಕ್ಕೆ ಅಭಿನಂದನೆಗಳು.

✍️ಸೌಮ್ಯ ದಯಾನಂದ
ಡಾವಣಗೆರೆ
