ಗೆಳೆತನ ವಜ್ರದಂತೆ ಗಟ್ಟಿಯಾಗಿರಲಿ
ಎಳೆತನದಿಂದ ಮುದಿತನದವರೆಗೂ ನಿರಂತರವಿರಲಿ

ತನು ಮನ ಧನದಿಂದ ಸಹಾಯಕ್ಕಿರಲಿ ಕಷ್ಟದಲಿ
ನಮ್ಮಗಳ ಆಸ್ತಿ ಅಂತಸ್ತು, ಗೆಳೆತನದಲ್ಲಿ ಅಡ್ಡಬರದಿರಲಿ

ಕೈ ಕಣ್ಣು ನಡುವಿನ ಸಂಬಂಧದಂತಿರಲಿ
ಕೈಗೆ ನೋವಾದರೆ ಕಣ್ಣು ಅಳುವಂತಿರಲಿ
ಕಣ್ಣೀರು ಬಂದರೆ ಕೈ ಕಣ್ಣೀರು ವರೆಸುವಂತಿರಲಿ
ವ್ಯಕ್ತಿ ನೋಡಿ ಮಾಡುವ ಗೆಳೆತನ ತಾತ್ಕಾಲಿಕ ವ್ಯಕ್ತಿತ್ವ ನೋಡಿ ಮಾಡುವ ಗೆಳೆತನ  ಶಾಶ್ವತ

ಗೆಳೆಯ ಜೊತೆಯಲ್ಲಿದ್ದರೆ ಮನಸ್ಸಿಗೆ ಖುಷಿ ಖುಷಿ ಅವನು ಕಣ್ಣಿಗೆ ಕಾಣಿಸದಿದ್ದರೆ ಮನಸ್ಸಿಗೆ ಕಸಿವಿಸಿ
ರಕ್ತ ಹಂಚಿಕೊಂಡು ಹುಟ್ಟಲಿಲ್ಲ
ಆಸ್ತಿ ಹಂಚಿಕೊಂಡು ಬೆಳೆಯಲಿಲ್ಲ
ಕಷ್ಟ ಸುಖದಲ್ಲಿ ಭಾಗಿಯಾಗಿ ಬಾಳುವದೇ ಗೆಳೆತನ

ಗೆಳೆತನವೊಂದು ಸುಂದರ ಕವನ
ಬರೆದರೂ ಮುಗಿಯದ ಲೇಖನ

ಶ್ರೀನಿವಾಸ ಪಾಟೀಲ, ಕಡಿವಾಲ ಕಲ್ಯಾಣ ನಗರ, ಧಾರವಾಡ