ಪೂತನಿ ಕಂಸ,ದುಯೋ೯ಧನ.
ಎಂಬ ದುಷ್ಟರ ಸಂಹಾರಕ್ಕೆ ಜನನ.
ಹುಟ್ಟು ಕಾರಾಗೃಹದಲ್ಲಿ, ದೇವಕಿಯ ಗಭ೯ದಿಂದ.
ಕಂಸನ ಹೆದರಿಕೆಗೆ ಗೋಕುಲಕ್ಕೆ ರವಾನೆಯಾದ/

ಯಶೋದೆ -ನಂದರಿಗಾಯಿತು ಪರಮಾನಂದ
ಗೋಪಾಲಕನಂತೆ ಬೆಳೆದ ಬಾಲ ಮುಕುಂದ.
ಗೋಕುಲದ ಬೀದಿಗಳಲ್ಲಿ ಲೀಲೆಗಳ ಮೆರೆದ.
ಬೆಣ್ಣೆ -ಹಾಲು-ಮೊಸರಿನ ಮಹಿಮೆ ಸಾರಿದ/

ಹಾಲುಣಿಸುವಂತೆ ಬಂದ ಪೂತನಿಯ ಕೊಂದ.
ವಿಷವನ್ನೇ ಉಣಿಸಿದ್ದರೂ ಅವಳನ್ನೂ ಮಾತೆ ಎಂದ.
ಮಾತೃತ್ವದ ಮಹಿಮೆ ಅನನ್ಯವೆಂದ.
ಲಾಲಿಸಿ -ಪಾಲಿಸಿದ ಯಶೋದೆಯ ಗುಣಗಾನ ಮಾಡಿದ/

ಸುತನಾಗಿ ಮಾತಾ ಪಿತರ ಸಂಕಷ್ಟ ಪರಿಹರಿಸಿದ.
ಜನ್ಮ ನೀಡಿದ ದೇವಕಿ ಪರಮ ಪುನೀತಳೆಂದ.
ತಂದೆ ವಸುದೇವನ ಪರಮ ಸಂತೃಪ್ತಿ ಪಡಿಸಿದ .
ಜಗದ್ಗುರುವೇ ತಾನಾದರೂ ಗುರು ಸೇವೆ ಗೈದ/

ಹಿರಿಯಳಾದರೂ ರಾಧೆ ಗೋಕುಲದ ರಾಧೆಯೊಡನೆ ಆಡಿದ.
ಅಂತರಂಗದಲಿ ಅವಳ ಸಾಮೀಪ್ಯ ಅನುಭವಿಸಿದ.
ನಿಷ್ಕಾಮ ಪ್ರೇಮಕ್ಕೆ ಚಿರ ಋಣಿ ತಾನಾದ.
ಅನುಕ್ಷಣದಿ ಜೊತೆಯಾಗಿರು ಎಂದು ಕೊಳಲಾಗಿಸಿ,ತನ್ನುಸಿರು ತುಂಬಿ ನಾದ ಹೊಮ್ಮಿಸಿದ/

ಒಲಿದು ಬಂದ ರುಕ್ಮಿಣಿ,ಭಾಮೆ,ಜಾಂಬವತಿಯರ ಪರಿಗ್ರಹಿಸಿದ.
ಗೋಪಿಕೆಯರ ಭಕ್ತಿಗೆ ಪರವಶ ತಾನಾದ.
ರಕ್ಷಿಸೆಂದು ಮೊರೆದ ದ್ರೌಪದಿಯ ಮಾನ ಕಾಯ್ದ.
ಕಾಮಧೇನು ರೂಪಿ ಗೋವುಗಳ ಸಂರಕ್ಷಿಸಿದ/

ನೀತಿಯೊಂದಿಗೆ ರಾಜಕಾರಣವ ತಾ ಗೈದ.
ಕಮ೯ಣ್ಯೇ ವಾಧಿಕಾರಸ್ತೆ ಎಂದು ಕತ೯ವ್ಯ ಮಹಿಮೆ ಬೋಧಿಸಿದ.
ನಂಬಿದ ಪಾಂಡವರಿಗೆ ಸಾರಥಿಯೇ ತಾನಾದ.
ಸಿಂಹಾಸನಾಧಿಪತಿಯಾದರೂ ಸ್ನೇಹಿತ ಸುಧಾಮನ ಬಿಗಿದಪ್ಪಿದ/

ಲೀಲೆ -ವಿನೋದ-ತುಂಟಾಟಗಳೆಲ್ಲ ಮಾನವ ಸಹಜವೆಂದ.
ಅಪವಾದ, ಅಪಹಾಸ್ಯ,ನಿಂದೆ,ವಂದನೆಗಳೂ ಸಹಜವೆಂದ.
ಮಾನವ ಶರೀರಿ ತಾನಾದುದರಿಂದ,ಮರಣ ಹೊಂದಿದ/

ವಿಧಿ ಅಣತಿಯಂತೆ ಬದುಕು, ಮಾಯೆ ಮಿಗಿಲೆಂದ.
ಸತ್ಕಮ೯ಗಳಲ್ಲಿ ಬದುಕಿ
ಮುಕ್ತಿ ನಿಮಗಿಹುದೆಂದ.
ಮೋರ ಮುಕುಟಧರ ಜಗದಾನಂದ.
ಮೇಘವಣ೯ ತಾನಾಗಿ ಕಪ್ಪು ಮೋಡಗಳಿಂದ ಮಳೆ,ಇಳೆಗೆ ಕಳೆ ಎಂದ/

ಜೈ ಶ್ರೀ ಕೃಷ್ಣ, ಜೈ ಜೈ ಶ್ರೀ ಕೃಷ್ಣ
ಹರೇ ಕೃಷ್ಣ,ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ

✍️ ಕಮಲಾಭಿತನಯೆ
(ಶ್ರೀಮತಿ ರೇಖಾ ನಾಡಿಗೇರ)
ಹುಬ್ಬಳ್ಳಿ.