ಸ್ವಲ್ಪ್ ದಿನಾ ದೂರಿದ್ದು ನೋಡು
ತಿಳಿದೀತು,,,,,, ನಾನಿರದ ಪಾಡು
ನನ್ನೊಲುಮೆ ಹಾಡು….
ನನ್ನೊಲುಮೆಯ ಹಾಡು

ಬಳಿಬಂದಾಗಲೆಲ್ಲ ಮುನಿಸು…
ಬೈದು ದೂಡುವಷ್ಟು ವಿರಸ..
ಸರಸ್ ವಿರಸ ನಿನಗದು ಸಲೀಸು.
ಸ್ವಲ್ಪ್ ದಿನಾ ದೂರಿದ್ದು ನೋಡು
ತಿಳಿದೀತು ನನ್ನೊಲುಮೆಯ ಹಾಡು…

ಕಣ್ಣಲ್ಲಿ ಪುಟಿದೇಳುವ ಸಿಟ್ಟಿನ ಕಾರಂಜಿ
ಇದನೋಡಿ ಬಳಿಬರಲು ನಾನಂಜಿ
ಕೇಳದೆ ಹೊರನಡೆದೆ ನಾ, ಸಿಹಿಗಂಜಿ
ಬಳಿಬರುವೆ ಎಂದು, ಕಾಯುತ ನಿಂತೇ ಹಲ್ಲುಗಿಂಜಿ..
ಮುನಿಸು ಬಿಟ್ಟು ತುಟಿಮೇಲೆ ಹೂ ಅರಳಿಸು ಅಪರಂಜಿ.. //ಸ್ವಲ್ಪ್ ದಿನಾ ದೂರಿದ್ದು ನೋಡು //

ಸಲ್ಲಾಪ ಸವಿ, ಮರೆತರೆ, ಬದುಕೇ ಕಹಿ
ನನ್ನ ತುಟಿ ಭಾವನೆ,ನಿನ್ನ ತುಟಿ ಅರಿತರೆ, ತುಟಿ ಯುದ್ಧ ಸಿಹಿ…..
ನಿನ್ನ ಎದೆಯ ಮೇಲೆ ಮೆಲುವಾಗಿ ನಾ ಮಾಡುವೆ ಸಹಿ
ಇದಕ್ಕಿಡುವೆ ಜೀವನ್ ಪರ್ಯಂತ ಪ್ರೇಮದ … ವಹಿ
ಸಿಹಿಕಹಿಗೆ, ನೀ ಸಹಿ,,, ನಾ ವಹಿ (ಸ್ವಲ್ಪ್ ದಿನ ದೂರಿದ್ದು ನೋಡು )

ಬಿರುಬಿಸಿಲಿಗೆ ಹೂ ಅರಳದು, ಹೊಂಬಿಸಿಲಿಗೆ ಮಾತ್ರ ,
ತಿಂಗಳನ ಚಳಿಗರಳದು ಕಮಲ, ಬೆಳದಿಂಗಳಿಗೆ ಮಾತ್ರ..
ಬಿರುಗಾಳಿಗೆ ಪರಿಮಳ ಪಸರಿಸದು,, ತಂಗಾಳಿಗೆ ಮಾತ್ರ..
ಬಿರುನಡೆಗೆ, ಬಿರುನುಡಿಗೆ ಪ್ರೀತಿ ಬದಕದು,, ಸವಿನುಡಿಗೆ, ಸಿರಿನಡಿಗೆಗೆ ಮಾತ್ರ… ನಾ ನಿನ್ನ ಪ್ರೀತಿ ಪಾತ್ರಾ…. (ಸ್ವಲ್ಪ್ ದಿನ ದೂರಿದ್ದು ನೋಡು )

✍️ರೇವಣಸಿದ್ಧಯ್ಯ ಶಿವಪ್ಪಯ್ಯನಮಠ
ಹೂಲಿ, ತಾ:ಸವದತ್ತಿ ಜಿ:ಬೆಳಗಾವಿ