ತಂಪೆರಚುವ ಸರದಿ
ರವಿಯ ಕೋಪಾದಿಗಳ ಸರಸಿ
ಕಣ್ಣ ತಣಿಪ ವರದಿ
ಜೀವದೊಡಲ ಸಂಭ್ರಮಕೆ
ಹಸಿದೊಡಲ ತುಂಬಿ
ಚೈತನ್ಯದ ಚಿಲುಮೆ ಶ್ರಾವಣ.
ಹಬ್ಬ ಹರಿದಿನಗಳ ಸಡಗರ
ತೆರೆ ಮರೆಯ ಮಬ್ಬು ತೆರೆಸಿ
ವೃತ ಪೂಜೆಗಳ ಆಚರಣೆ
ದೇವನೊಲಿಸುವ ಪರಿ
ಮೈಮನಕೆ ಪುಳಕ
ಭಕ್ತಿ ಭಾವದಿ ಪುನೀತ ಶ್ರಾವಣ.
ಹಸಿರುಡುಗೆ ಕಂಗೊಳಸಿ
ಮಧುವಣಗಿತ್ತಿಯ ಪಯಣ
ಕುಡಿಯೊಡೆವ ಶುಭಕರ
ರಸ ಉಕ್ಕುವ ತರುಣ
ಸಡಗರದ ಸಾರ
ಉಲ್ಲಾಸಕೆ ಹೊಸ್ತಿಲು ಶ್ರಾವಣ.
ನವ ಕಾವ್ಯದ ಉಡುಗೊರೆ
ರಸಾನುಭವಗಳ ಅಂಕುರ
ಭಾವದೊಕುಳಿಗೆ ಹಾಡು ಹಸೆ
ಪುರಾಣ ಪುಣ್ಯ ಕಥೆಗಳ ಪಾರಣ
ಹೂ ಕಂಪ ಬೀರಿ
ಪೊರೆಯ ಕಳಚುವ ಶ್ರಾವಣ.
✍️ರೇಷ್ಮಾ ಕಂದಕೂರ
ಶಿಕ್ಷಕಿ, ಸಿಂಧನೂರು
