ಹುತ್ತ ಎಲ್ಲಿದೆ ನೋಡಿ ಹಾಲು ಹಾಕಿದರಾತು
ನಾನಾ ವಿಧದ ಉಂಡಿ ಮಾಡು ಮಾಡುವದಿದೆ
ಅರಳು ಅರಳಿಟ್ಟು ತಂಬಿಟ್ಟು
ಸೆಂಗಾ ಪುಟಾಣಿ ಬೆಲ್ಲಾ ಹೆಸರಿಟ್ಟು ಗೋಡಂಬಿ ದ್ರಾಕ್ಷಿ
ಮನೂಕು ಕಸಕಸಿ ಎಳ್ಳು…..
ಮಿಲ್ಕಿಮಿಸ್ಟ ಘಮ ಘಮ ತುಪ್ಪಾ.
ತನ್ನಿರೆಂದಳು ಭಾಮೆ
ಹಾಗೆ ಈ ಪಂಚಮಿಗೆ ಬರುವಳು ಮಗಳು, ನಿಮ್ಮ ತಂಗಿ ಗಾಯತ್ರಿ
ಸೊಸೆಗೂ ನನಗೂ
ಚಂದದ ಸೀರೆ ತನ್ನಿ….
ರೇಷ್ಮೆಯಾದರೇ ಚಂದಾ
ನೀವು ಕೊಡಿಸುವದೆ ಸೀರೆ
ವರುಷಕೆ ಎರಡು ಬಾರಿ
ದೀಪಾವಳಿಗೆ ಪಂಚಮಿಗೆ
ಜೋಕಾಲಿ ಕಟ್ಟಿ ಕೋಡಿ ಮೊಮ್ಮಕ್ಕಳಿಗೆ
ಬಟ್ಟೆಯು ಬೇಕು ಅವರಿಗೆ. ಹಣಕೊಡಿ ಅವರಿಗೆ ಇಷ್ಟದ ಬಟ್ಟೆ ಅವರೆ ಕೊಳ್ಳಲಿ
ಏಕಾದರು ಬರತಾವ ಹಬ್ಬ
ನಮ್ಮ ಹಬ್ಬ ಹೊಳಿ ಹಬ್ಬವೆ ನಮಗೆ ಪಾಡ
ಜಯ ಜಯ ನಾಗೇಶ್
✍️ಗೋಪಾಲ ಕ ದೇಶಪಾಂಡೆ
ಹುಬ್ಬಳ್ಳಿ
