ಪತಿಗೆ ಸತಿಯೆಂದಳು..
“ತನ್ನಿ ಇಂದೆರಡು
ಲೀಟರ್ ಹೆಚ್ಚುಹಾಲು.!”

ಸಿಡುಕುತ ಗಂಡನೆಂದ..
“ಇಂದೇನು ವಿಶೇಷ..??”

ನಗುತ ನುಡಿದಳವಳು..
“ಹುತ್ತದ ನಾಗಪ್ಪನಿಗೆ
ಬೇಕೊಂದು ಲೀಟರ್
ಹಾಲು ತನಿಯೆರೆಯಲು.
ಮತ್ತೊಂದು ಲೀಟರ್
ಹಾಲು ನಮ್ಮನೆಯ
ಸಿಡುಕು ನಾಗಪ್ಪನಿಗೆ
ಅರ್ಪಿಸಿ ಪೂಜಿಸಲು.”.!

ಕುಹಕದಿ ಪತಿದೇವನೆಂದ
“ಮದುವೆಯಾದ ವರ್ಷಕ್ಕೆ
ನನ್ನೆಲ್ಲ ಹಲ್ಲುಗಳನು ಕಿತ್ತು
ಕೂಡಿಸಿಹೆ ಮಹರಾಯತಿ.
ಮತ್ತಿನ್ನೇಕೆ ಹೇಳಿಂದು..
ನನಗೀ ಪೂಜೆ-ಶಾಂತಿ..??”

ಅಣಕದ ನಗೆಯೊಂದಿಗೆ
ನುಡಿದಳು ಸತಿಶಿರೋಮಣಿ..
“ಹಲ್ಲುದುರಿದ್ದರೂ ನಿಂತಿಲ್ಲ
ಇನ್ನೂ ಈ ಸಿಟ್ಟು-ಹಾರಾಟ.
ಹಾಗಾಗಿಯೇ ನಿಮಗಿಂದು..
ವಿಶೇಷ ಪೂಜಿಸುವಿಕೆ
ನಿಲ್ಲಿಸಲು ಆ-ನಿಮ್ಮ
ಕೋಪ ಭುಸುಗುಟ್ಟುವಿಕೆ”.!!

✍️ಎ.ಎ.ನ್.ರಮೇಶ್. ಗುಬ್ಬಿ.