ನಾಗರ ಪಂಚಮಿ ನಾಡಿಗೆ ದೊಡ್ಡದು
ನಮ್ಮ ನಾರಿಯರ ಮನಸ್ಸು ನಮಗೆಲ್ಲ ದೊಡ್ಡದು
ನಾಗಗೆ ಹಾಲೆರೆವರು, ತಂಬಿಟ್ಟು ತಾವ್ ತಿನ್ನುವರು
ಮರ ಜೋಕಾಲಿ ಆಡುವದು ತುಸು ಕಡಿಮೆ ಅನಿಸಿದರೂ,
ಪುಳಕಿತರು ಹಳ್ಳಿಗರು, ಗಿಡ ವೇರಿ ಜೋಕಾಲಿ ಜೀಕುವರು
ತಂಗಿಯ ಕರಕೊಂಡು ಅಣ್ಣ ತವರಿಗೆ ಬರುವರು
ಸಡಗರಡಿ ಜೀವನದ ಜೋಕಾಲಿ ಜೀಕುವರು
ಜಾರದೇ ಬೀಳದೇ ತಾರಾ ಮಂಡಲ ನೋಡ್ವರು
ಆ ತಾಯಿ, ಆ ತವರು, ಆ ಒಡಹುಟ್ಟಿದವರು, ಒಮ್ಮನದಿ ಎಲ್ಲರೂ ಉಂಡಿಯ ತಿನ್ನುವರು
ಎಲ್ಲರೂ ಅವರವರ ಪ್ರೀತಿ ಪಾತ್ರರು
ಅಂದು ಭೂಮಿ ಎತ್ತಿದ ಶೇಷ ದೇವರು
ಹಾಲು ಕುಡಿಯದೇ ತಾ ಕಾಯುವ ಅಕ್ಕ ತಂಗಿಯರ ತವರು
ನಾಗ ಪಂಚಮಿ, ಚೌತಿ ಪ್ರತಿ ವರುಷ ಜೋರು
ಹೆಂಗಳೆಯರು ಎಳೆವರು ತವರಿನಾ ತೇರು
ಮಿಂಚುವ ಮುತೈದಿಯರು
ಗಡ್ಡ ಬಿಟ್ಟು ಓಡಾಡುವ ಶ್ರಾವಣದಿ ಪುರುಷರು
ತಂಬಿಟ್ಟು ತಾವ್ ತಿಂದು ಘುರಕಿ ಹೊಡೆವ ಆ ಎಲ್ಲರೂ ನಮ್ಮವರು
ಮಣ್ಣು ನಾಗಗೆ ಹಾಲು, ಲೈವ್ ನಾಗಗೆ ಕೋಲು
ಇದು ವಾಸ್ತವಿಕ ನಮ್ಮಲು
ಇದುವೇ ರಾಜಾಜಿಸುವ ಪಂಚಮಿ ಮಜಲು
“ಈ ದೇಹವೇ ದೇಗುಲು, ಶೇಷ ಶಾಯಿಯೇ ಮನಡಲು.
ಎಲ್ಲರಿಗೂ ಪಂಚಮಿಯ ಶುಭಾಶಯಗಳು
✍️ ಶ್ರೀ ಆರ್.ಪಿ.ಕುಲಕರ್ಣಿ.
ಪುಣೆ
