ನಾಗರ ಪಂಚಮಿ ನಾಡಿಗೆ ದೊಡ್ಡದು ಅಣ್ಣಾ ಬರುವನು ಕರಿಲಕ ಬಾ ಮಗಳೇ ಬಾ.
ಅಳ್ಳು ತಂಬಿಟ್ಟು ತುಂಬಿ ಮನದಾಗ ನೆನೆಯುತ್ತಾ ಮನದಾಳದ ಮಾತು ಹೇಳುವೆ ಬಾ ಮಗಳೇ ಬಾ.
ಮಗಳು ಬರುವಳೆಂದು ಮುಂದಿನ ಮಾವಿನ ಗಿಡಕ ಹಡದಪ್ಪ ಹಾಕ್ಯಾನ ಜೋಕಾಲಿ ಆಡು ಬಾ ಮಗಳೇ ಬಾ.
ಬಳೆಗಾರಗ ಬರಹೇಳಿನಿ ಕೆಂಪು ಬಣ್ಣದ ಬಳಿ ಕೈ ತುಂಬಾ ಹಾಕೊಂಡು ಜೋಕಾಲಿ ಆಡಲು ಬಾ ಮಗಳೇ ಬಾ.
ಹೇಳಿ ನೇಯಿಸಿದ ತುಂಬಾ ಬಣ್ಣದ ಸೀರೆ ಧಡಿ ಕೆಂಪು ಸೇರಗಿಗಿ ಇರಲಿ ಗೀಳಿ ಎರಡು ಉಂಡು ಉಟ್ಟು ಹೊಗುವಿಯಂತೆ ಬಾ ಮಗಳೇ ಬಾ.
ಕರಿಗಡಬು ಕರಿದಿನಿ ಹಂಗನೂಲ ಸುತ್ತಿನಿ ನಾಗರಿಗಿ ಹಾಲ್ಯೇರಿಯಲು ಯಾರೀಗಿ ಖಳಿಸಲೇ ಬಾ ಮಗಳೇ ಬಾ.
ಹೆತ್ತ ಕರುಳೀದು ಹಗಲಿರುಳು ನೆನಸುವದು ಹಬ್ಬದ ನೆವಮಾಡಿ ಹಡದಮ್ಮನ ಮನ ಸಂತೈಸಲು ಬಾ ಮಗಳೇ ಬಾ.
✍️ಚಂದ್ರಕಲಾ.ಎಲ್.ತಟ್ಟೇಪಳ್ಳಿ.
ರೂದನೂರ.ತಾ.ಚಿಂಚೋಳಿ.
