ಜನನಿ ಕಂದನಿಗುಣಿಸುವ ಪ್ರಥಮ ಆಹಾರ
ಸೃಷ್ಠಿಯ ನವಜಾತರಿಗೆಲ್ಲ ಇದೇ ಜೀವಕಾಧಾರ
ಅಮೃತಕೆ ನೀ ತತ್ಸಮಾನ ಪದ ಕ್ಷೀರ
ಹಾಲೆಂದರೆ ಸಕಲ ಜೀವಗಳ ಪ್ರಾಣಾಧಾರ.
ನಿರ್ಮಲತೆˌ ಪರಿಶುದ್ಧತೆಗೆ ನೀ ಇನ್ನೊಂದು ಹೆಸರು
ದಧಿˌ ನವನೀತ ಘೃತಗಳು ನಿನ್ನ ಇತರ ಅವತಾರ
ಆರೋಗ್ಯಕ್ಕಿರಲಿ ಸ್ವಾದಿಷ್ಟಕ್ಕಿರಲಿ ನೀನೇ ರುಚಿಕರ
ಸಾತ್ವಿಕತೆಯ ಪ್ರತಿರೂಪˌನೀ ದೈವೀಕತೆಯ ಸಾಕ್ಷಾತ್ಕಾರ.
ಕಾಮಧೇನುವಿನ ಕೆಚ್ಚಲಿನಿಂದ ನಿನ್ನ ಉಗಮ
ಅಭಿಷೇಕ ನೈವೇದ್ಯವೆಂದರೆ ನೀನೇ ಸೂಕ್ತ ಉಪಮ
ಉಪಚಾರˌಉಪಹಾರ ಉಪವಾಸಗಳು ನಿನ್ನಿಂದ ಸುಗಮ
ಎಷ್ಟು ಬಣ್ಣಿಸಿದರೂ ಸಾಲದು ನಿನ್ನ ಮಹಿಮ.
ವಿಶ್ವ ಕ್ಷೀರ ದಿನದ ಶುಭಾಶಯಗಳು
✍️ಶ್ರೀಮತಿ.ಸುಜಾತಾ ರವೀಶ್
ಮೈಸೂರು
