ಇಂದು ವಿಶ್ವ ನಗುವಿನ ದಿನವಂತೆ
ಸದಾ ಜಗವಾಗಿರಲಿ ನಗೆಯ ಸಂತೆ

ತರು ಲತೆಗಳಲಿ ಹೂವರಳಿ ನಗುವಂತೆ
ಪುಟ್ಟ ಕಂದನ ನಿರ್ಮಲ ನಗೆಯಂತೆ
ಮನ ಮನಗಳ ನಡುವಣ ಸೇತುವಂತೆ
ಈ ನಗು ದೇಶ ಗಡಿಗಳ ಮೀರಿದ ಭಾಷೆಯಂತೆ

ಅರಳಿರಲಿ ಮನˌಮೊಗದಲ್ಲಿರಲಿ ಮಂದಹಾಸ
ಪ್ರಿಯರೊಡನಾಟದಲಿ ಮಿನುಗಿರಲಿ ಮೃದು ಹಾಸ
ಬೇಡ ಕುಹಕ ಕುತ್ಸಿತ ಕಪಟ ತುಂಬಿರುವ ಪರಿಹಾಸ
ಬಾಳ ಬಾನಲಿ ನಗೆಯ ಚಂದಿರ ತರಲಿ ಸದಾ ಸಂತಸ.

ವಿಶ್ವ ನಗೆದಿನದ ಶುಭಾಶಯಗಳು


✍️ಸುಜಾತಾ ರವೀಶ್
ಮೈಸೂರು