ಇದ್ದೂ ಇಲ್ಲದಂತೆ ಬದುಕಬೇಕು ನಾವಿಲ್ಲಿ
ಸತ್ತ ಮೇಲೂ ಬದುಕುವಂತಿರಬೇಕು ನಾವಿಲ್ಲಿ

ಸ್ತುತಿ ನಿಂದೆಯ ಮಾತುಗಳಿಗೆ ಕಿವುಡಾಗಿರು
ಸ್ಥಿತಿ ಬದಲಾಗಬಹುದು ಕಾಯಬೇಕು ನಾವಿಲ್ಲಿ

ಚಿಕ್ಕ ತಪ್ಪನ್ನೇ ಬೆರಳು ಮಾಡಿ ತೋರಿಸುವರು
ಪಕ್ವವಾಗುವವರೆಗೂ ನಿಲ್ಲಬೇಕು ನಾವಿಲ್ಲಿ

ಹಾರ ತುರಾಯಿ ಪಾರಿತೋಷಕ ಬಲು ದುಬಾರಿ
ತುಂಬೊ ತನಕ ಬೊಗಸೆಯೊಡ್ಡಬೇಕು ನಾವಿಲ್ಲಿ

ಕತ್ತಲೆಗೆ ದೂಡಿ ನಗುವ ಜನರೇ ಇವರೆಲ್ಲ
ಅಮು ಬೆಳಕಿಗಾಗಿ ಕಾಯಬೇಕು ನಾವಿಲ್ಲಿ

✍️ಅಮುಭಾವಜೀವಿ 
(ಅಪ್ಪಾಜಿ ಎ ಮುಸ್ಟೂರು)
ಮುಸ್ಟೂರು ಅಂಚೆ ಜಗಳೂರು ತಾಲೂಕು ದಾವಣಗೆರೆ ಜಿಲ್ಲೆ