ಸ್ಕಾಟ್ಲೆಂಡಿನಾ ದೊರೆಯೊಮ್ಮೆ ಮುಳುಗಿಹೋದನು
ಏಕಾಂತದಾಲೋಚನೆಯಲಿ
ಅವನೊಬ್ಬ ಹಿರಿಯದೊರೆ, ತಲೆಯನೇರಿತ್ತುರಾಜಮಕುಟ
ಆದರೇನು ಹೃದಯಭಾರ ಏನೋಕೊರೆ
ತನ್ನಾಪ್ತಪ್ರಜೆಗಳನು ಸುಖವಾಗಿರಿಸಲೆಂದೆ
ಯತ್ನಿಸಿದ ಮಹತ್ಕಾರ್ಯಕೆ
ಯತ್ನ ಮರುಯತ್ನಗಳು ನಡೆದವೊಂದರಮೇಲೊಂದು
ಸಫಲತೆಯ ಕಾಣದೆಯೆ ಮರುಗಿದ್ದ
ದಿನದಿನಕೆ ಚಿಂತೆಯಹುಳು ಮಿದುಳಕೊರೆದಿತ್ತು
ಮೋರೆಯಲಿ ನಗುವು ಮಾಸುತಿತ್ತು
ನಿರಾಶೆಯ ಹಾಸಿ ಹೊದ್ದ ಹಿರಿಯದೊರೆ ತಾನು
ಚಿಂತೋದಧಿಯಲುರುಳಿದ.
ಮರಳಿ ಮರಳಿ ಮುತ್ತುವಾಲೋಚನೆಗಳಲಿ
ಅತ್ತಿತ್ತ ದಾಪುಗಾಲಲಿ ಸಂಚರಿಸುತ್ತ
ತನಗೆ ತಾನೆ ನಿರಾಶೆಯಪ್ಪುತಲಿ ನುಡಿದ
ಬಿಡುವೆನೆನ್ನೀಯತ್ನವೆಲ್ಲವ!
ನೆಟ್ಟದಿಟ್ಟಿಯಲಿ ಮನೆಯ ಮಾಡ ನಿರುಕಿಸುತ
ಯೋಚನೆಯಲಿ ಮುಳುಗಿರಲು
ಕಂಡಿತವನಿಗಲ್ಲಿ ಜಾರುತಿರುವಾ ಜೇಡರಾಹುಳು
ರೇಶಿಮೆಯ ಬಲೆಯಿಂ ಕೆಳಗುರುಳಿತು
ದೊರೆಯ ಯೋಚನೆ ಕಡಿಯಿತು: ದೃಷ್ಟಿ ಹುಳುವಲಿ ನೆಟ್ಟಿತು
ಜಾರಿಬಿದ್ದಾ ಹುಳುವಿನ ಪ್ರತಿಕ್ರಿಯೆಗೆ:
ಬಲು ನಿಡಿದು ದೂರ ದಾರಿಯದು ಚಾವಣಿಗೆ
ರೇಶಿಮೆಯ ಒಂಟಿದಾರವೆ ಹುಳುವಿಗಾಧಾರ
ಹತ್ತಲಾಪುದೆ ಇದಲ್ಲಿಗೆ? ಮಾಡುವುದದೇನನೀಗ?
ಉಸಿರು ಬಿಗಿ ಹಿಡಿದ ದೊರೆ
ಕೆಳಗುರುಳಿದಾ ಹುಳುಹಿಡಿದ ದಾರವ ನಂಬಿ
ಏರತೊಡಗಿತು ಮೇಲೆ, ನೇರ ದಾರಿಯಲಿ
ಜಾರಿ ಉರುಳಿತು ಮತ್ತೆ ಬಂದಿತು, ನೆಲದ ತೀರದ ತಳಕೆ
ಆದರೇನು? ಮತ್ತೆ ತೊಡಗಿತು ಯತ್ನದಿ
ಇತ್ತ ಏರುತಲತ್ತ ಜಾರಿತು, ಮತ್ತೆ ಏರಿತು ಮರಳಿ ಜಾರಿತು
ಬಿಡದೆ ಯತ್ನವ ಹುಳುವು ನಡೆಸಿತು
ಸೋಲಿನೀ ಪರಿ ಕಂಡುದೊರೆಯು, ತನಗೆ ತಾನಿಂತೆಂದನು
ಮತ್ತೆ ಏರದು ಹುಳುವು ಸೋಲೊಪ್ಪಲು!
ದೊರೆಯ ಯೋಚನೆ ಕಡಿದುಬಿತ್ತು; ಎಣಿಕೆ ತನ್ನದು ತಪ್ಪಲು
ಹುಳುವು ಹೊರಟಿತು ಮತ್ತೆ ಮೇಲೇರಲು
ಮರಳಿ ಏರಿತು ಜೇಡ ಇನಿತಿನಿತೇ ಮೇಲಕೆ
ತುತ್ತತುದಿಗಿನ್ನೊಂದೆ ಹಾರು!
ಅಗೋ ಮುಟ್ಟಿತು ಜೇಡ ನೋಡು ತನ್ನ ಗುರಿಯನು
ತಾನಿಟ್ಟ ಶ್ರದ್ಧೆಯ ಫಲವನು
ಕೂಗಿದನು ದೊರೆಯುತ್ಸಾಹದಲಿ, ಪುಳಕಗೊಂಡಿತು ಮೈ
ಹರ್ಷದಲಿ ನಿಮಿರಿ ನಿಂತಿತು ರೋಮವು
ಹುಳುವಿನಾ ಜಯಕೆ ಹರ್ಷದಲಿ ಕೂಗಿದನು
ತಾನೂ ನಿರಾಶೆಯ ತೊರೆದನು
ಪುರುಷಯತ್ನದಿ ಎಲ್ಲ ಸಾಧ್ಯವು ಸಾಧ್ಯವಹುದು
ಎಂಬಾ ಪಾಠವ ಕಲಿತನು
ಇತಿಹಾಸದ ಪುಟಗಳಲಿ ಮೂಡಿತವನಾ ಹೆಸರು
ತನ್ನೆತ್ನದಲಿ ಜಯಗಳಿಸಿದನ ಹೆಸರು

BRUCE AND THE SPIDER
OR Scotland's and for freedom's right

The Bruce his part has played;–
In five successive fields of fight
Been conquered and dismayed:
Once more against the English host
His band he led, and once more lost
The meed for which he fought;
And now from battle, faint and worn,
The homeless fugitive, forlorn,
A hut’s lone shelter sought.

And cheerless was that resting-place
For him who claimed a throne;–
His canopy, devoid of grace,
The rude, rough beams alone;
The heather couch his only bed–
Yet well I ween had slumber fled
From couch of eider down!
Through darksome night till dawn of day,
Absorbed in wakeful thought he lay
Of Scotland and her crown.

The sun rose brightly, and its gleam
Fell on that hapless bed,
And tinged with light each shapeless beam
Which roofed the lowly shed;
When, looking up with wistful eye,
The Bruce beheld a spider try
His filmy thread to fling
From beam to beam of that rude cot–
And well the insect’s toilsome lot
Taught Scotland’s future king.

Six times the gossamery thread
The wary spider threw;–
In vain the filmy line was sped,
For powerless or untrue
Each aim appeared, and back recoiled
The patient insect, six times foiled,
And yet unconquered still;
And soon the Bruce, with eager eye,
Saw him prepare once more to try
His courage, strength, and skill.

One effort more, his seventh and last!–
The hero hailed the sign!–
And on the wished-for beam hung fast
That slender silken line!
Slight as it was, his spirit caught
The more than omen; for his thought
The lesson well could trace,
Which even “he who runs may read,”
That Perseverance gains its meed,
And Patience wins the race.

✍️ಇಂಗ್ಲೀಷ್ ಮೂಲ:ಬರ್ನಾರ್ಡ್ ಬಾರ್ಟನ್  (1784-1849)
ಕನ್ನಡ ಅನುವಾದ:ಡಾ.ಸತ್ಯವತಿ ಮೂರ್ತಿ
ಮ್ಯಾಂಚೆಷ್ಟರ್,‌ ಇಂಗ್ಲೆಂಡ್