ಪುಲ್ವಾಮಾ ನೆಲದಲ್ಲಿ ನಲವತ್ತು ಯುವ ಯೋಧರ ರಕ್ತ ಹರಿದ ದಿನ/
ಹನಿ ಹನಿಯೂ ಕೆಂಗುಲಾಬಿಯಾಗಿ ಭಾರತಮ್ಮನ ಚರಣವೇರಿದ ದಿನ/

ಅವಕಾಶವಾದಿಗಳ,
ಧಮಾ೯ಂಧರ ಒಡ್ಡತನಕ್ಕೆ ಯೋಧರ ಕನಸುಗಳು ಬಲಿಯಾದ ದಿನ/
ದೇಶದ ಕಣ ಕಣವೂ ನಿಮಗೆ ಸಲ್ಲಿಸಲಿ ವಂದನ/

ಬಂದ್ ಆಗಲಿ ವಿದೇಶಿ ವ್ಯಾಲೆಂಟೈನ್ಸ್ ಡೇ ಆಚರಣ/
ಆಗಲಿ ನಲವತ್ತು ಯೋಧರ ಬಲಿದಾನ ದಿನ/

ಅರಿಯಬಹುದೇ? ಬಾಯಿ ಬಡುಕ ನಾಯಕರು ನಿಮ್ಮ ಬಲಿದಾನ/
ಸಿಂಹದ ಮರಿಗಳು ನೀವು
ಶೌರ್ಯವೇ ನಿಮ್ಮ ಗುಣ/

ದೇಶಕ್ಕಾಗಿ ರಕ್ತ ಚೆಲ್ಲಿದಿರಿ ನೀವೆಲ್ಲ ಈ ದಿನ/
ಅಧಿಕಾರಕ್ಕಾಗಿ ಪಿತೂರಿ ಮಾಡುವ ಢೋಂಗಿ ನಾಯಕರು ಕ್ಷಣ ಕ್ಷಣ/

ಮರಣವಿಲ್ಲ ನಿಮಗೆ ಯೋಧರೇ ನಿಮ್ಮ ಜೀವನವೇ ಪಾವನ/
ಜನುಮವೇ ಯಶೋಗಾಥೆಯ ಪುಣ್ಯ ಪುರಾಣ/

ಧನ್ಯ ನಿಮ್ಮ ಹೆತ್ತವರು
ಧನ್ಯವು ದೇಶ ನಿಮ್ಮಂಥ ವೀರಪುತ್ರರ ಪಡೆದು ತೀರಿಸಲಾದೀತೆ? ನಿಮ್ಮ ಋಣ/

✍️ಶ್ರೀಮತಿ ರೇಖಾ ನಾಡಿಗೇರ 
ಹುಬ್ಬಳ್ಳಿ