ಮಕ್ಕಳ ಮಾಣಿಕ್ಯ ಭಗವತಿಗೆ ಕಾವ್ಯಾಭಿನಂದನೆ

ಬಾಗಲಕೋಟೆಯೊಡಲ ಬೀಳಿಗಿ ಮಡಿಲ ಗರಡದಿನ್ನಿಯಲ್ಲಿ ಜನಿಸಿದಿರಿ
ಗುಡದಪ್ಪ ಚಂದ್ರಾಬಾಯಿ ದಂಪತಿಗಳುದರದಲಿ ಉದಯಿಸಿದಿರಿ
ಮಮಪು ಹಲಗತ್ತಿ ತಮ್ಮಣ್ಣ ಬಸವಾನಂದರ ಮೈತ್ರಿ ಬೆಳೆಸಿದಿರಿ
ಜನಮಾನಸ ಮೆಚ್ಚುವ ಕಥೆ ಕಾದಂಬರಿ ಕೃತಿ ರತ್ನಗಳ ರಚಿಸಿದಿರಿ
ವಿಜಯಾದಲಿ ಬೆರೆತು ವಿದ್ಯಾ ವಿರೇಂದ್ರ ಪಡೆದ ಭಗವತಿ ನಿಮಗಿದೋ ಕಾವ್ಯಾಭಿನಂದನೆ

ಹಟಕಿನಾಳ ಶಾಲೆಯಲ್ಲಿ ಅಕ್ಷರ ಸೇವೆಗೈಯುತ ಜನಮೆಚ್ಚಿದ ಶಿಕ್ಷಕರಾದಿರಿ
ಮಕ್ಕಳಿಗೆ ಕಲಿಸುತ ಶಾಲೆಯ ಬೆಳೆಸುತ ಉತ್ತಮ ಶಿಕ್ಷಕರಾದಿರಿ
ಗುಬ್ಬಚ್ಚಿ ಗೂಡಲಿ ಬರೆಯುತ ಶಿಕ್ಷಣಸಿರಿ ಪುರಸ್ಕಾರಕೆ ಭಾಜನರಾದಿರಿ
ಶಿಕ್ಷಣ ಫೌಂಡೇಶನ್ ಗುರು ಪುರಸ್ಕಾರದಿ ಗೌರವ ಪಡೆದಿರಿ
ಜನಮೆಚ್ಚಿದ ಉಪಾಧ್ಯಾಯ ಭಗವತಿ ತಮಗಿದೊ ಕಾವ್ಯಾಭಿನಂದನೆ

ಕಾರವಾರ ಧಾರವಾಡ ಆಕಾಶವಾಣಿಯಲ್ಲಿ ಕಥೆ ಕಾವ್ಯ ಚಿಂತನೆ ಮಾಡಿದಿರಿ
ಬದುಕಿನ ಸುತ್ತ ಮುತ್ತ ಸಹೃದಯ ಓದುಗರ ಹೃನ್ಮನ ಗೆದ್ದಿರಿ
ಟಿವಿ ಒಂಬತ್ತರಲಿ ಯಾವುದು ಭೂತ ಕಿರು ಚಿತ್ರದಲಿ ನಟಿಸಿದಿರಿ
ಕರುನಾಡಿನಾಚೆಯು ದೇವಮ್ಮನ ಲೋಟ ಕಥಾ ಹಂದರ ಕಟ್ಟಿದಿರಿ
ಚಲುವ ಚಿಣ್ಣರ ಕಥೆಗಾರ ಭಗವತಿ ನಿಮಗಿದೋ ಕಾವ್ಯಭಿನಂದನೆ

ನೈರುತ್ಯ ಮಾರುತ ಬಿಸಲು ಮತ್ತೇ ಹೊಸ ಗೆಳೆಯರ ಬಂಧ ಬೆಸೆದಿರಿ
ಮಕ್ಕಳು ಓದಿದ ಟೀಚರ್ ಡೈರಿ ಬರೆಯುತ ಮಕ್ಕಳ ಚಂದಿರರಾದಿರಿ
ರಾಜರತ್ನಂ ಕೃತಿಗಳ ಅವಲೋಕಿಸುತ ಬಾಲ್ಯ ವಿಕಾಸ ಮಾಡಿದಿರಿ
ಸುಂದ್ರಮ್ಮಜ್ಜಿಯ ಮೊಮ್ಮಗನಂತೆ ಕೃತಿ ಹೆಣೆದು ಶಿಶು ಮಾಣಿಕ್ಯರಾದಿರಿ
ಮಕ್ಕಳ ಕಾದಂಬರಿಕಾರ ಭಗವತಿ ನಿಮಗಿದೋ ಕಾವ್ಯಭಿನಂದನೆ

ಕವಿ ಸಂಘ ಮಕ್ಕಳ ಮಂಟಪ ಮಸಾಪದಲಿ ಜೀವನ ಶಿಕ್ಷಣ ನೀಡಿದಿರಿ
ಮಕ್ಕಳ ಲೋಕಕೆ ಹೊಸ ದಿಗಂತ ಕಟ್ಟುತ ನವೀನ ಚಂದ್ರರಾದಿರಿ
ಪ್ರಜಾವಾಣಿ ಸಂಯುಕ್ತ ಕರ್ನಾಟಕದಲ್ಲಿ ನೀತಿ ಕಥೆ ಲೇಖನ ಪ್ರಕಟಿಸಿದಿರಿ
ಕಸಾಪ ವಸುದೇವ ಭೂಪಾಲಂ ದತ್ತಿ ಪುರಸ್ಕಾರ ಮುಡಿಗೇರಿಸಿದಿರಿ
ಮಕ್ಕಳ ಮಂದಾರ ಭಗವತಿ ನಿಮಗಿದೋ ಕಾವ್ಯಭಿನಂದನೆ

ಗಣಕರಂಗ ಶ್ರಾವಣದಿ ವೈಚಾರಿಕತೆ ಮಧುರ ಮೈತ್ರಿಯೆಡೆಗೆ ಸಾಗಿದಿರಿ
ಚುನಾವಣೆಯಲ್ಲಿ ಉತ್ತಮ ಮತಗಟ್ಟೆ ಅಧಿಕಾರಿ ಪ್ರಶಂಸನಾ ಪತ್ರ ಪಡೆದಿರಿ
ಜಗವೆಲ್ಲ ನಗುತಿರಲೆಂದು ಸುಹೇಚ ಕವಿಗೆ ಹರಿಸಿ ಲೇಖನ ಬರೆದಿರಿ
ಮಡಕಿ ತಬಕದಹೊನ್ನೀಹಳ್ಳಿ ಬೆಲವಂತರ ಶಾಲೆಗಳಲಿ ಆದರ್ಶ ಗುರುವಾದಿರಿ
ತೊಟ್ಟಿಲೂರಿನ ಶಿಕ್ಷಕ ಸಾಹಿತಿ ಭಗವತಿ ನಿಮಗಿದೋ ಕಾವ್ಯಭಿನಂದನೆ

✍️ಸುಹೇಚ ಪರಮವಾಡಿ
(ಸುಭಾಷ್ ಹೇಮಣ್ಣಾ ಚವ್ಹಾಣ) ಶಿಕ್ಷಕ ಸಾಹಿತಿಗಳು, ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ಮಂಜುನಾಥ ನಗರ, ಹುಬ್ಬಳ್ಳಿ ಶಹರ.