ಗಜಲ್ ಗಳ, ಅಜೀಬ್ ಸಂಭಂದ, ಸಂಭ್ರಮ ಒಂದು ರೀತಿಯ ಮಜಾ. ಕಳೆದ ಡಿಸೇಂಬರ್ 15 ರಂದು ನನ್ನ ಫೇಸ್ಬುಕ್ದಲ್ಲಿ ನನ್ನದೇ ವಿಡಿಯೋ ಅಂಕಣದಲ್ಲಿ ಅನಸೂಯಾ ಜಹಗೀರದಾರ ಬರೆದ 60 ಗಜಲ್ ಗಳ ಗುಲದಸ್ತಾ ಬಗ್ಗೆ 23 ನಿಮಿಷ ಮಾತನಾಡಲು ಹಚ್ಚಿದ್ದು ಆಜೀಬ್ ವೂ ಹೌದು, ಗಜಬ್ ಕೂಡಾ ಹೌದು. ಆಮೇಲೆ ಅದನ್ನೇ ಶ್ರಾವಣಕ್ಕಾಗಿ ಬರೆದು ಕೊಡಿ ಅಂದಾಗ ಗಜಲ್ ದ ಮಜಾ ಸಜಾ ಅಂತಾ ಅನಿಸ್ತು. ಮಾತಾಡುವದು ಸರಳ ಅದನ್ನೇ ಬರೆಯುವ ದಿದೆಯಲ್ಲ ಅಷ್ಟೇ ಕಠಿಣ ಅನ್ನೋದೇ ಸಜಾ.

ಗಜಲ್ ಗಳ ಬಗ್ಗೆ ಬರೆಯುವದೇ ಸವಾಲು. ಇನ್ನು ಮೂಲ ಹಿಂದಿ, ಉರ್ದು ಭಾಷೆಗಳ ಜಮಾನಾ ಸ್ತರಗಳಲ್ಲಿ ಸೌಂದರ್ಯ,ಪ್ರೇಮ, ವಿರಹ, ಭಕ್ತಿ ಗಳ ಸೆಲೆಗಳಲ್ಲಿ ಕಂಡುಕೊಂಡ ಶಾಹಿರಿ, ಗಜಲ್ ಗಳು ಕನ್ನಡದಲ್ಲಿ ನೆಲೆ ಕಂಡುಕೊಳ್ಳುವದಕ್ಕೆ ಯಾರು ಯಾರು ಪ್ರಯತ್ನ ಮಾಡಿದ್ದಾರೋ ಅದು ನಮ್ಮ ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಅಲ್ಲಲ್ಲಿ ಹರಿಯುವ ಜುಳು ಜುಳು ನೀರಾಗಿ ಗುಪ್ತ ಗಾಮಿನಿ ಆಗಿ ಬಿಡುತ್ತದೆ ಅದರಲ್ಲಿ ಪ್ರಸ್ತುತ “ಆತ್ಮಾನುಸಂಧಾನ” ಪುಸ್ತಿಕೆ ಲೇಖಕರಾದ ಅನಸೂಯ ಜಹಗೀರಧಾರ ಸರಸ್ವತಿ, ಸರಯು ನದಿಯ ಹಾಗೆ ಗಜಲ್ ಗಳನ್ನು ಕೊಪ್ಪಳ ದಲ್ಲಿ ಹರಿಸಿದ್ದಾರೆ. ಈ ಗಜಲ್ ಗಳ ವೈಶಿಷ್ಟವೆಂದರೆ ಓದಬೇಕಾಗುವ ರೀತಿ ಯಲ್ಲಿ ಓದಿದರೆ ಮಾತ್ರ ಹೃದಯ ಮೈ, ಮನಗಳನ್ನ ತಟ್ಟುತ್ತವೆ ಗುಣಿ ಗುಣಿ ಸುತ್ತ,, ಜೋರಾಗಿ ಯಾರೋ ಸಮೀಪ ದಲ್ಲಿ, ಅಥವಾ ತೋಳ ತೆಕ್ಕೆಯಲ್ಲಿ ಕೇಳುವವರು ಇದ್ದಾರ, ಅಥವಾ ಬಹಳ ದೂರದಲ್ಲಿ ಇದ್ದಾರೆ ಅಂತ ಭ್ರಮೆ ಹುಟ್ಟಿಸುವ ಪುಳಕ ಸಾಮರ್ಥ್ಯ ಈ ಗಜಲ್ ಗಳಲ್ಲಿದೆ.

ಒಟ್ಟಿಗೆ 60 ರ ಈ ಗಜಲ್ ಗುಲ್ ದಸ್ತಾ 60 ಸಂವತ್ಸರ ದಾಟಿದವರಿಂದ ಹಿಡಿದು ಹದಿ ಹರೆಯದ ಯುವಕ ಯುವತಿಯರಿಗೆ ರೋಮಾಂಚನ, ಕಚಗುಳಿ, ಬೆರಗು, ವಿಸ್ಮಯ ಗಳನ್ನು ಅನುಭವಿಸುವ ಇಲ್ಲಾ ಪರಿತಪಿಸುವ
ಹಲವು ಕ್ಷಣ ಗಳನ್ನ ಈ ಆತ್ಮಾ ನುಸಂಧಾನ ನೀಡುತ್ತದೆ. ವಾಚಕರು ಹೇಗಾದರೂ ಓದಲಿ ಮೈ ಮನ ಮುಟ್ಟುವದು ಅಂತೂ ಗ್ಯಾರಂಟಿ.

✍️ಅರವಿಂದ ಕುಲಕರ್ಣಿ, ಧಾರವಾಡ