ಜೀವನ ಚರಿತ್ರೆ ಸಾಹಿತ್ಯದ ಒಂದು ವಿಶಿಷ್ಠ ಪ್ರಾಕಾರ. ವ್ಯಕ್ತಿಯ ಬದುಕಿನ ಮಹತ್ವದ ಕ್ಷಣಗ ಳನ್ನು ಸ್ವಾರಸ್ಯಕರವಾಗಿ ನಿವೇದಿಸುವುದಾಗಿದೆ. ಅವರ ಜೀವಿತಾವಧಿಯ ಸಾಧನೆಗಳನ್ನು ದಾಖಲಿ ಸುವುದಾಗಿದೆ. ಮೊದಮೊದಲು ಧಾರ್ಮಿಕ ಪುರುಷರ, ಸಮಾಜಸುಧಾರಕರ, ಇತಿಹಾಸದ ಮಹತ್ವದ ವ್ಯಕ್ತಿಗಳ ಜೀವನ ಚರಿತ್ರೆಗಳ ಬರವಣಿಗೆ ಸಾಗಿತು. ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳ, ನಟ ನಟಿಯರ, ವಿಜ್ಞಾನಿ, ದೇಶ ಭಕ್ತರ, ಕವಿ ಸಾಹಿತಿಗಳ ವ್ಯಕ್ತಿ ಜೀವನ ಚರಿತ್ರೆಗಳ ಬರವಣಿಗೆ ವಿಸ್ತಾರ ಕಂಡಿದೆ.

ಜೀವನ ಚರಿತ್ರೆಗಳು ಓದುಗರಿಗೆ ಜೀವನಾನು ಭವ ನೀಡುತ್ತವೆ. ಆ ವ್ಯಕ್ತಿಯ ಕಾಲಘಟ್ಟದ ಸಾಮಾಜಿಕ, ಧಾರ್ಮಿಕ, ಆರ್ಥಿಕ ಅಂಶಗಳ ಅರಿವು ಆಗುವುದರ ಜೊತೆಯಲ್ಲಿ ಪರಂಪರೆ, ನಂಬಿಕೆ, ಆಚರಣೆಗಳ ಸಂಸ್ಕೃತಿ ಮಹತ್ವ ಗೊತ್ತಾ ಗುತ್ತದೆ. ಜೀವನ ಚರಿತ್ರೆ ಬರೆಯುವಾತ ಆ ವ್ಯಕ್ತಿ ಜನನ, ಬಾಲ್ಯ, ಆತನ ಪರಿಸರ, ಶಿಕ್ಷಣ, ಜೀವನ ಸಾಧನೆ ವಿವರಗಳು ಸಹಜವಾದರೂ ಅವರ ವಿಶೇಷತೆಗಳ ಅನಾವರಣ ಕೃತಿಯಲ್ಲಿರಬೇಕು. ವಿಶಿಷ್ಠ ಬರಹದ ಶೈಲಿಯ ಮೂಲಕ ಕೃತಿಯನ್ನು ಓದುವ ಭಾವ ಹೆಚ್ಚಿಸಬಹುದಾಗಿದೆ.

ನಮ್ಮದು ಆಧ್ಯಾತ್ಮಿಕ ನೆಲೆವೀಡು. ಇಲ್ಲಿ ಅನೇಕ ಪುಣ್ಯಪುರುಷರು ಜನಿಸಿದ್ದಾರೆ. ಅನೇಕ ಮಹಾತ್ಮರು ತಮ್ಮ ತಪೋಬಲದಿಂದ ಜನರ ದುಃಖ ದುಮ್ಮಾನಗಳನ್ನು ನಿವಾರಿಸಿದ್ದಾರೆ. ಜನರಲ್ಲಿ ಧಾರ್ಮಿಕ ಭಾವನೆಯನ್ನು ಜಾಗೃತ ಗೊಳಿಸಿದ್ದಾರೆ. ಅವರಲ್ಲಿ ನವಲಗುಂದ ನಾಗಲಿಂಗ ಸ್ವಾಮಿಜಿ, ಸಂತ ಶಿಶುನಾಳ ಶರೀಫ ಹೀಗೆ ಅನೇಕ ಮಹಾಪುರುಷರನ್ನು ನೆನಪಿಸಿ ಕೊಳ್ಳಬಹುದು. ಅಂತವರ ಜೀವನ ಚರಿತ್ರೆಗಳು ಓದಿಗೆ ನಿಲುಕುತ್ತಿವೆ. ಅದೇ ತೆರನಾಗಿ ಇಂದಿಗೂ ಎಲೆಮರೆಯ ಕಾಯಿಯಂತೆ ಮಾನವ ಕಲ್ಯಾಣ ಕ್ಕಾಗಿ ಶ್ರಮಿಸುವ ಅನೇಕ ಮಹನೀಯರು ಈ ಕಾಲ ಘಟ್ಟದಲ್ಲಿದ್ದಾರೆ. ಅಂತವರಲ್ಲಿ ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಬೂದಗುಂಪಿಯ ಹಂಪಮ್ಮನವರು ಒಬ್ಬರು.

ಓರ್ವ ಸಾಮಾನ್ಯ ಮಹಿಳೆಯಾಗಿ ಕುಟುಂಬ ಜೀವನ ನಿರ್ವಹಿಸುತ್ತಾ, ಪತಿಯ ಕಿರಿಕಿರಿಯ ಹಲವಾರು ಸಂಕಷ್ಟಗಳನ್ನು ಎದುರಿಸಿ ಬದುಕು ಕಟ್ಟಿಕೊಂಡ ಹಂಪಮ್ಮನವರು ನಂತರದಲ್ಲಿ ದೇವರತ್ತ ಚಿತ್ತಹರಿಸಿ ಶಿವಶರಣೆಯಾದರು. ಅವರನ್ನು ಅರಸಿ ಬಂದವರ ಸಂಕಷ್ಟಗಳನ್ನು ದೂರ ಮಾಡಿ ಸುಖಮಯ ಜೀವನ ಕಲ್ಪಿಸಿದ್ದಾರೆ. ಇವರ ಜೀವನ ಕುರಿತಾದ “ಜೀವಸೆಲೆ ” ಎನ್ನುವ ವಿಶಿಷ್ಠ ಕಾದಂಬರಿ ರಚಿಸಿದವರು ಸಿಂಧನೂರಿನ ಹಿರಿಯ ಸಾಹಿತಿ ಗಳಾದ ಕರಿಬಸಯ್ಯಸ್ವಾಮಿ ಹಿರೇಮಠ. ಸಾಹಿತ್ಯ ಲೋಕದಲ್ಲಿ ಮಹಿಳೆಯರ ಜೀವನ ಚರಿತ್ರೆಯ ಕಾದಂಬರಿಗಳು ವಿರಳ. ಮಹಿಳೆಯರ ಕುರಿತಾಗಿ ಹಿರೇಮಠ ಅವರು ಜೀವನಚಿತ್ರಣ ಆಧಾರಿತ ಕಾದಂಬರಿ ರಚಿಸಿದಿದ್ದು ಅಭಿನಂದನಾರ್ಹ ಸಂಗತಿ.

ಕನ್ನಡದ ಸಾರಸ್ವತ ಲೋಕದಲ್ಲಿ ಕಥೆ, ಕಾದಂಬರಿ, ಕವನ, ನಾಟಕ, ಜೀವನಚರಿತ್ರೆ, ಪ್ರವಾಸಕಥನ, ಪುರಾಣಗಳು ಹೀಗೆ ಸಾಹಿತ್ಯದ ಹಲವು ಪ್ರಾಕಾರ ಗಳಲ್ಲಿ ಹುಲುಸಾದ ಕೃಷಿ ಮಾಡಿರುವ ಕರಿಬಸ ಯ್ಯಾಸ್ವಾಮಿ ಹಿರೇಮಠ ಅವರು ಓರ್ವ ನಿವೃತ್ತ ಪಾಚಾರ್ಯರು. ಇಲ್ಲಿಯವರೆಗೆ 33 ಕೃತಿಗಳನ್ನು ನಾಡಿನ ಓದುಗಲೋಕಕ್ಕೆ ನೀಡಿದ್ದಾರೆ. ಇವರ ಅನುಪಮ ಸಾಹಿತ್ಯ ಸೇವೆಗಾಗಿ ಅನೇಕ ಸಂಘಟ ನೆಗಳು ಆಧ್ಯಾತ್ಮಿಕ ಮಠಗಳು ಕವಿರತ್ನ, ವೀರ ಕನ್ನಡಿಗ, ನಾಟಕರತ್ನ, ಷಟ್ಪದಿರತ್ನ ಹೀಗೆ ಅನೇಕ ಸಾಹಿತ್ಯಿಕ ಬಿರುದು ಗಳನ್ನು ನೀಡಿ ಗೌರವಿಸಿವೆ. ಇವರದು ವಿಶೇಷ ಸಾಹಿತ್ಯ ಕುಟುಂಬ ಎನ್ನಬಹುದು. ಇವರ ಮಗ ಶಂಕರದೇವರು ಹಿರೇಮಠ, ಸೊಸೆ ಅಶ್ವಿನಿ ಹಿರೇಮಠ ಇರ್ವರು ಶಿಕ್ಷಕ ವೃತ್ತಿಯಲ್ಲಿದ್ದು ಕೊಂಡು ಸಾಹಿತ್ಯ ಬರಹ ಹಾಗೂ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.
ಹಿರೇಮಠ ಅವರು ತಮ್ಮ ಸುದೀರ್ಘ ವೃತ್ತಿ ಬದುಕನ್ನು ಸಂತಸದಿಂದ ನಡೆಸಿದ್ದಾರೆ. ಸಾಮಾಜಿಕವಾಗಿ, ಧಾರ್ಮಿಕವಾಗಿ ಸ್ಮರಣೀಯ ಕಾಯಕದ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ. ಮಹತ್ತರವಾದ ಧಾರ್ಮಿಕ ಅಂಶಗಳ ಕುರಿತಾದ ಅನೇಕ ಪುರಾಣಗಳನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸಿರುವುದು ವಿಶೇಷತೆಯಾಗಿದೆ.

ನವಿರಾದ ನಿರೂಪಣೆಯೊಂದಿಗೆ ಸಾಗುವ ಈ ಕಾದಂಬರಿಯಲ್ಲಿ ಸಾಮಾನ್ಯ ಮಹಿಳೆ – ಯೊಬ್ಬಳು ಅಸಾಮಾನ್ಯ ಕಾರ್ಯಗಳನ್ನು ಮಾಡುವ ಯಶೋಗಾಥೆ ಇದೆ. ಇಲ್ಲಿ ಜನರು ಎದುರಿಸುವ ಅನೇಕ ಸಂಕಷ್ಟಗಳ ಸರಮಾಲೆಗಳ ದಾಖಲೆ ಇದೆ. ಲೇಖಕರು ಇದನ್ನು ಪ್ರಸಂಗರೂಪ ದಲ್ಲಿ ಬರೆಯುತ್ತಾ, ಅಮ್ಮನವರು ನೀಡಿದ ಪರಿಹಾರಗಳ ವಿವರಣೆ ಇದೆ. ಈಗಾಗಲೇ ಈ ಅಮ್ಮನವರ ಕುರಿತಾಗಿ ೨೦೨೦ ರಲ್ಲಿ ‘ಬೂದಗಂಪಿ ಕರುಣಾಮಯಿ ಅಮ್ಮ’ ಎಂಬ ಜೀವನ ಚರಿತ್ರೆ ರಚಿಸಿದ್ದಾರೆ. ಮೂವತೈದು ಅಧ್ಯಾಯಗಳಲ್ಲಿ ಹಂಪಮ್ಮ ನವರ ಬದುಕು ಬವಣೆಗಳ ಚಿತ್ರಣ ಕಾಣುತ್ತೇವೆ. ಜನರ ಸಂಘಟನೆಗಳಿಂದ ದೇವಾಲಯಗಳನ್ನು ನಿರ್ಮಿಸಿದ್ದು, ಅವು ಜನರ ಶಾಂತಿಧಾಮಗಳಾ ಗಿದ್ದು ಇವೆಲ್ಲ ಸಾಹಸದ ಅಥವಾ ಪವಾಡದ ಕಾರ್ಯವೆಂದೆ ಭಾವನೆ ಬರುವ ನಿಟ್ಟಿನಲ್ಲಿ ಕೃತಿ ಯ ಬರಹ ಸಾಗುತ್ತದೆ. ಈ ಕೃತಿಯ ವಿಶೇಷ ವೆಂದರೆ ಆ ಅಮ್ಮನವರನ್ನು ಭೇಟಿ ಮಾಡಿ ತಮ್ಮ ಸಮಸ್ಯೆ ಗಳನ್ನು ಪರಿಹರಿಸಿಕೊಂಡ ವ್ಯಕ್ತಿಗಳನ್ನು ಸ್ವತಃ ಲೇಖಕರು ಭೇಟಿಯಾಗಿ ಅವರುಗಳ ಹೇಳಿಕೆಗಳನ್ನು ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಇದೊಂದು ಕಾಲ್ಪನಿಕವಲ್ಲದ ವಾಸ್ತವ ಅಂಶಗಳನ್ನು ಹೊತ್ತ ಕಾದಂಬರಿಯಾ ಗಿದೆ. ಅಮ್ಮನವರು ಕೇವಲ ಧಾರ್ಮಿಕ ಚಟು- ವಟಿಕೆಗಳಿಗೆ ಮೀಸಲಾಗದೆ ಅನೇಕ ವಿಧವಾ ಮಹಿಳೆಯರಿಗೆ ಮರು ಮದುವೆಗಳನ್ನು ಮಾಡಿಸಿದ ಸಾಮಾಜಿಕ ಕಳಕಳಿ ಮೆಚ್ಚುಗೆಯಾ ಗುತ್ತದೆ.

ಈ ಕೃತಿಯಲ್ಲಿ ಮಾತೆ ಹಂಪಮ್ಮನವರ ವಿಶೇಷ ಕಾರ್ಯಗಳನ್ನು ಲೇಖಕರು ಗುರುತಿಸಿದ್ದಾರೆ. ಇತಿಹಾಸದಲ್ಲಿ ದಾಖಲಿಸುವ ವಿಶಿಷ್ಠ ಕಾರ್ಯ ಮಾಡಿದ್ದು ಮೆಚ್ಚುವಂತಹದ್ದು. ಓದುಗರು ಆದರ ದಿಂದ ಈ ಕೃತಿಯನ್ನು ಒಪ್ಪಿಕೊಳ್ಳಲಿ ಎಂದು ಆಶಿಸುತ್ತಾ ಅವರನ್ನು ಆಭಿನಂದಿಸುವೆ.

ಪುಸ್ತಕದ ಹೆಸರು : ‘ಜೀವಸೆಲೆ’ 
ಪುಸ್ತಕದ ಪ್ರಾಕಾರ : ಕಾದಂಬರಿ ಲೇಖಕರ ಹೆಸರು: ಕರಿಬಸಯ್ಯ ಹಿರೇಮಠ ಪ್ರಕಾಶನ:ಶ್ರೀಶಾರದಾ ಪ್ರಕಾಶನ ಸಿಂಧನೂರು ಪ್ರಕಟವಾದ ವರ್ಷ: ೨೦೨೨ ಪುಟಗಳಸಂಖ್ಯೆ : ೧೧೦ ಬೆಲೆ: ೧೦೦ ಸಂಪರ್ಕ ಸಂಖ್ಯೆ: ೯೬೮೬೧೬೪೭೫೦
✍️ಶ್ರೀ ವೈ.ಜಿ.ಭಗವತಿ 
ಶಿಕ್ಷಕರು, ಸಾಹಿತಿಗಳು
ಕಲಘಟಗಿ