ನನ್ನ ಮೊದಲ ವೃತ್ತಿ ಪ್ರಾರಂಭವಾದದ್ದು ಯಲ್ಲಾಪುರ ತಾಲೂಕಿನ ಮದ್ನೂರ್ ಪಂಚಾಯ್ತಿ ಯ ಹುಣಶೆಟ್ಟಿಕೊಪ್ಪ ಗ್ರಾಮ. ನನಗದುವೆ ಹೊಸ ಗಾಥೆ. ಕಾರಣ ಅಲ್ಲಿರುವ ಭಿನ್ನ ಜನಾಂಗ, ಹಾಗೂ ವೈವಿದ್ಯಮಯ ಸಂಸ್ಕೃತಿ ಮೇಳೈಸಿದ ಊರೆಂದರೆ, ಸಿದ್ದಿ, ಮರಾಠಿ, ಗೌಳಿ ಜನಾಂಗ ದಿಂದ ಸುತ್ತುವರಿದ ಊರು. ಹೀಗಾಗಿ ಅಲ್ಲಿಯ ಜನಜೀವನವನ್ನು ಹತ್ತಿರದಿಂದ ನೋಡಿದ ಹಾಗೂ ಅವರೊಟ್ಟಿಗೆ ಒಡನಾಡಿದ ಅನುಭವ ಮರೆಯಲಾರದಂತ ಹುದು. ಗೌಳಿ ಅಥವಾ ಧನಗರ ಗೌಳಿಯ ಜನರು ತಮ್ಮದೇ ಆದ ಜನರ ಹಟ್ಟಿಯಲ್ಲಿ ಒಂದುಗೂಡಿ ಬದುಕುತ್ತ ಕರಡೊಳ್ಳಿ, ಮಾದೇವ ಕೊಪ್ಪ, ದೇಶಪಾಂಡೆನಗರ, ಅಲ್ಕೇರಿ ಗೌಳಿ ವಾಡ, ಬೈಲಂದೂರು ಗೌಳಿವಾಡ ಹೀಗೆ ಹಲವಾರು ಕಡೆ ವಿಶಿಷ್ಟ ರೀತಿಯಲ್ಲಿ ಜೀವನ ನಡೆಸುವ ಅವರ ಜೀವನ ಶೈಲಿಯನ್ನು ತಿಳಿದು ಕೊಂಡಷ್ಟು ಕಡಿಮೆ. ದನಗರ ಗೌಳಿಯವರ ಮೂಲ ನಮ್ಮ ರಾಜ್ಯದ ಉತ್ತರ ಕನ್ನಡ, ಧಾರವಾಡ, ಬೆಳಗಾವಿ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಹಾವೇರಿ ಇನ್ನಿತರ ಜಿಲ್ಲೆಗಳಲ್ಲಿ ವಾಸವಾಗಿರುವ ಧನಗರ ಗೌಳಿ ಜನಾಂಗವು ಮೂಲತಃ ಮಹಾರಾಷ್ಟ್ರ ಹಾಗೂ ಗೋವಾದಿಂದ ಕರ್ನಾಟಕಕ್ಕೆ ಹಲವಾರು ವರ್ಷಗಳ ಹಿಂದೆ ಬಂದ ಜನಾಂಗ ವಾಗಿದೆ.ಇವರ ಮೂಲ ಕಸಬು ಹೈನುಗಾರಿಕೆ. ಹಾಲು ಮಾರಿ ತಮ್ಮ ಜೀವನ ಕಂಡುಕೊಂಡಿರು ವುದು ನಮ್ಮ ಕಣ್ಮುಂದಿದೆ.

ಮೂವತ್ತೈದು ವರ್ಷಗಳ ಕಾಲ ನಮ್ಮ ಮನೆಗೆ ದೇಶಪಾಂಡೆನಗರದಿಂದ ಹಾಲಿನ ಬಾಟಲಿ ಹೊತ್ತು, ಕಚ್ಚೆಯುಟ್ಟು ಮನೆಬಾಲಿಗೆ ಬಂದು ಮೌಷಿ ದುದ್ ಹಾಡಲಾ ಅನ್ನುತ್ತಾ ಹಾಲ್ ತಂದಿದ್ದ ಎಂದು ಕನ್ನಡ ಮಾತಾಡಲು ಪ್ರಯತ್ನ ಮಾಡುತ್ತ ಬಾಡಲಿ ಬಾಗಿಲಿಗೆ ಸಿಗಿಸಿ ಕವಳ ಮೆಲ್ಲುತ್ತ ಕಿರುನಗೆ ಬಿರಿ ಮರೆಯಾಗುವ ದುಂಡಿ ಬಾಯಿಯನ್ನು ಮರೆಯಲು ಸಾಧ್ಯವಾ? ಈ ಜನಾಂಗವು ನೂರಾರು ಎಮ್ಮೆ ಹಾಗೂ ಹಸು- ಗಳನ್ನು ಸಾಕುತ್ತಿದ್ದು ಇಂದು ಇದರ ಸಂಖ್ಯೆ ಕೇವಲ ಹತ್ತು ಅಥವಾ ಅದಕ್ಕಿಂತ ಕಡಿಮೆ ಎಂದು ಹೇಳಬಹುದು. ಈ ಜನಾಂಗದವರು ಕಾಡಿನ ಮಧ್ಯದಲ್ಲಿ ವಾಸಿಸುತ್ತಿರುವುದರಿಂದ ಅಷ್ಟೇನು ಶುಚಿತ್ವದ ಮಹತ್ವವನ್ನು ತಿಳಿಯದ ಇವರ ವೈಯಕ್ತಿಕ ಸ್ವಚ್ಚತೆ ಬಗ್ಗೆ ಕೇಳುವುದೇ ಬೇಕಿಲ್ಲ. ಇವರು ವಾಸಿಸುವ ಸ್ಥಳಗಳಾದ ಗೌಳಿ ದೊಡ್ಡಿ ಗಳಿಗೆ ಭೇಟಿ ನೀಡಿದಂತಹ ವೇಳೆಯಲ್ಲಿ ವಯಸ್ಸಾದವರೂ, ಮಹಿಳೆಯರಷ್ಟೇ ಇರುತ್ತಿ ದ್ದರು. ಇವರುಗಳು ಬಹಳ ನಾಚಿಕೆಯ ಸ್ವಭಾವ ದವರು.
ಮೂಲತಃ ಹೈನುಗಾರರಾಗಿರುವ ಗೌಳಿಗರದ್ದು ಹಾಲು, ಮೊಸರು, ಬೆಣ್ಣೆ ವ್ಯಾಪಾರವೇ ಕುಲ ಕಸುಬು. ಜೊತೆಗೆ ಅಷ್ಟೋ ಇಷ್ಟೋ ಅರಣ್ಯ ಅತಿಕ್ರಮಣ ಭೂಮಿಯಲ್ಲಿ ಸಾಗುವಳಿ ಮಾಡಿ ಕೊಂಡಿದ್ದಾರೆ. ಮುಖ್ಯವಾಗಿ ಇವರು ಎಮ್ಮೆ, ದನ-ಕರುಗಳನ್ನೇ ಅವಲಂಬಿಸಿ ಜೀವನ ಸಾಗಿಸು ತ್ತಾರೆ. ಇದರಿಂದ ಇವರನ್ನು ದನಗರ ಗೌಳಿಗರು ಎಂದು ಹೆಸರಿಸಲಾಗುತ್ತದೆ. ಕಾಯಂ ಅರಣ್ಯ ಪ್ರದೇಶ ನಿವಾಸಿಯಾಗಿರು ವುದರಿಂದ ಕಾಡು ಪ್ರಾಣಿಗಳಿಂದ ತಮ್ಮನ್ನು ಜಾನುವಾರುಗಳೇ ರಕ್ಷಣೆ ಮಾಡುತ್ತವೆ ಎಂಬುವುದು ಇವರ ನಂಬಿಕೆ. ದನ-ಕರುಗಳಿಗೆ ಮೇವು ಒದಗಿಸುವ ಅರಣ್ಯದ ಗಿಡ-ಮರಗ ಳನ್ನು ದೇವರೆಂದು ಭಾವಿಸಿ ಪೂಜಿ ಸುತ್ತಾರೆ. ಇಲಾಖೆಗಿಂತ ಹೆಚ್ಚು ಗೌಳಿಗರಿಂದಲೇ ಅರಣ್ಯ ರಕ್ಷಣೆಯಾಗಿದೆ. ಈಗೀಗ ಗೌಳಿಜನಾಂಗ ದಲ್ಲಿ ಶಿಕ್ಷಣದ ಮಹತ್ವ ಜಾಗೃತಗೊಳ್ಳುತ್ತಿದೆ. ಕಲಿಕೆ ಯಲ್ಲಿ ಪ್ರಗತಿ ಸಾಧಿಸಲು ಹಾಗೂ ವಯಕ್ತಿಕ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನಹರಿಸುವುದು ಬಹುಮುಖ್ಯವಾಗಿದೆ. ಅವಕಾಶ ವಂಚಿತ, ಹಿಂದುಳಿದ ಜನಾಂಗವೆಂಬ ಒಳಕೂಗು ಇದೆ. ವಿಭಿನ್ನ ವೇಷಭೂಷಣದ ಮೂಲಕ ಪ್ರತಿನಿಧಿ ಸುವ ದನಗರ ಗೌಳಿ ಜನಾಂಗ ನಮಗೊಂದು ಹೆಮ್ಮೆ.

ಇವರು ಮೂಲತಃ ಮಹಾರಾಷ್ಟ್ರ ರಾಜ್ಯದ ಕೋಲ್ಹಾಪುರ, ರತ್ನಾಗಿರಿ, ಸೊಲ್ಲಾಪುರ ಜಿಲ್ಲೆಗ ಳಿಂದ ಕರ್ನಾಟಕ ರಾಜ್ಯದ ಕಡೆ ವಲಸೆ ಬಂದು ವಿವಿಧ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ತಮ್ಮದೇ ಆದ ದಡ್ಡಿಗಳನ್ನು ಮಾಡಿಕೊಂಡು ಹೆಚ್ಚಾಗಿ ಅರಣ್ಯ ಪ್ರದೇಶಗಳಲ್ಲಿಯೇ ವಾಸಿಸು ತ್ತಿದ್ದಾರೆ. ಈ ಗೌಳಿಗರ ಮೂಲ ಕಸುಬು ಪಶು ಸಂಗೋಪನೆ, ಇವರು ತಮ್ಮ ಪಶುಗಳಿಗೆ ಅನುಕೂಲಕ್ಕೆ ತಕ್ಕಂತೆ ದೊಡ್ಡಿಗಳನ್ನು ನಿರ್ಮಾಣ ಮಾಡಿಕೊಂಡು ವಾಸವಾಗಿದ್ದಾರೆ. ಪ್ರಾರಂಭದಲ್ಲಿ ಹೈನುಗಾರಿಕೆಯೇ ಇವರ ಪ್ರಮುಖ ಉದ್ಯೋಗ ವಾಗಿತ್ತು. ಬರುಬರುತ್ತ ಅರಣ್ಯಗಳಲ್ಲಿ ಭೂಮಿ ಯನ್ನು ಅಲ್ಪ ಸ್ವಲ್ಪ ಅತಿಕ್ರಮಣ ಮಾಡಿ, ವ್ಯವಸಾಯ ಮಾಡಿಕೊಂಡು ಜೀವನ ನಡೆಸು ವುದು ಆರಂಭಿಸಿದ್ದಾರೆ. ಇತ್ತೀಚೆಗೆ ಹೈನುಗಾರಿಕೆ ಕಡಿಮೆ ಮಾಡಿ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸದ ಕಡೆ ವಾಲಿದ್ದಾರೆ.
ಈ ದನಗರ ಗೌಳಿ ಸಮುದಾಯದ ಎಲ್ಲಾ ಜನರು ಉತ್ತಮವಾದ ಆಚಾರ ವಿಚಾರಗಳನ್ನ ಇಂದಿಗೂ ಸಹ ಆಚರಿಸುತ್ತಾ ಬಂದಿದ್ದಾರೆ. ಇವರಿಗೆ ವಿಶೇಷಹಬ್ಬ ಎಂದರೆ “ದಸರಾ”. ನವ ರಾತ್ರಿಯ ಸಮಯದಲ್ಲಿ ಒಂಭತ್ತು ದಿನವೂ ಸಹ ಉಪವಾಸ ವೃತವನ್ನು ಅಚರಿಸುವುದು ತುಂಬಾ ವಿಶೇಷ. ದಸರಾ ಸಮಯದಲ್ಲಿ 09 ದಿನವೂ ಪೂಜೆ-ಪುಣಸ್ಕಾರಗಳನ್ನು ಅಚರಿಸುವುದು ಸರ್ವೇ ಸಾಮಾನ್ಯ.ನವರಾತ್ರಿ ಕೊನೆಯ ಮೂರು ದಿನಗಳಲ್ಲಿ ಪ್ರತಿದಿನವೂ ವಿಶೇಷ ಪೂಜೆಗಳು ಪ್ರತಿಯೊಂದು ಮನೆಯಲ್ಲಿ ಊರಿನ ಎಲ್ಲ ಜನರು ಸೇರಿ ಮಾಡುವುದಂತೂ ತುಂಬಾನೇ ವಿಶೇಷ ಹಾಗೂ “ಹರ್ ಹರ್ ಚಾಂಗ ಬಲಾ” ಎಂಬ ಘೋಷಣೆಯನ್ನು ಕೂಗುವರು, ಇದರರ್ಥ ಎಲ್ಲರಿಗೂ ಶುಭವಾಗಲಿ, ಒಳ್ಳೆಯದಾಗಲಿ ಎಂದು. ಹಾಲು, ಮಜ್ಜಿಗೆ, ಬೆಣ್ಣೆ, ತುಪ್ಪದಿಂದ ತಯಾರಿಸಿದ ಪದಾರ್ಥಗಳು ತುಂಬಾ ವಿಶೇಷ. ನವರಾತ್ರಿಯ 09 ದಿನವೂ ಸಹ ಯಾವುದೇ ರೀತಿಯ ಮಾಂಸಾಹಾರ ಪದಾರ್ಥಗಳನ್ನು ಸೇವಿಸುವುದಿಲ್ಲ. ಹೈನಿನ ಉತ್ಪನ್ನಗಳಿಂದ ತಯಾರಿಸಿದ ಪದಾರ್ಥಗಳ ಅನಾವರಣ.

ದಸರಾ ಮುಗಿದ ಮಾರನೇ ದಿನ ಆಚರಿಸುವ ವಿಶೇಷ ಹಬ್ಬವೇ “ಶಿಲ್ಲಂಗಾನ”.ಇದರ ವಿಶೇಷತೆ ಎಂದರೆ ಇದನ್ನು ಒಂದು ಊರಿನಲ್ಲಿ ಹಮ್ಮಿ ಕೊಂಡು ಅಕ್ಕಪಕ್ಕದ ಊರುಗಳಿಗೆ ತಾಂಬೂಲ ವನ್ನು ಕೊಟ್ಟು ಅಮಂತ್ರಿಸಲಾಗು ತ್ತದೆ.ಈ ಆಮಂತ್ರಣದ ಮುಖಾಂತರ ನೂರಾರು ಜನ ಬೇರೆ ಬೇರೆ ಊರುಗಳಿಂದ ಆಗಮಿಸುತ್ತಾರೆ. ಹಾಗೂ ಗಜ ಕುಣಿತವನ್ನು ಕುಣಿದು, ರಂಜಿಸಿ ಹಲವಾರು ವಿಧಿ ವಿಧಾನ ಗಳ ಮೂಲಕ ಹಬ್ಬ ನೆರವೇರಿದ ಮೇಲೆ ಅನ್ನ ಪ್ರಸಾದವನ್ನು ಸ್ವೀಕರಿ ಸಿದ ನಂತರ ತಮ್ಮ ತಮ್ಮ ಊರುಗಳಿಗೆ ತೆರಳುವರು.

ದನ, ಕರುಗಳಿಗೆ ಪೂಜೆ ಸಲ್ಲಿಸಿ ಹಬ್ಬಕ್ಕೆ ತೆರೆ: ಮಜ್ಜಿಗೆ ಸುರಿದುಕೊಂಡು ಸ್ನಾನ ಮಾಡಿ ತಮ್ಮ ಆರಾಧ್ಯ ದೈವ ಪಾಂಡುರಂಗ(ವಿಠೋಬ) ದೇವರಲ್ಲಿ ಶ್ರದ್ಧಾ ಭಕ್ತಿಯಿಂದ ಪ್ರಾರ್ಥಿಸಿ, ಸುತ್ತಲಿನ ಗಿಡ, ಮರಗಳಿಗೆ, ಸಾಕಿದ ದನ, ಎಮ್ಮೆ, ಕರುಗಳಿಗೆ ಪೂಜೆ ಸಲ್ಲಿಸುತ್ತಾರೆ. ಬಳಿಕ ಬನ್ನಿ ಮುಡಿದು ಪರಸ್ಪರ ಶುಭಾಶಯ ಕೋರುತ್ತಾರೆ. ಹಾಲು, ಮೊಸರು ಬೆಣ್ಣೆ-ತುಪ್ಪ ದಿಂದ ಸಿಹಿ ತಿನಿಸುಗಳನ್ನು ತಯಾರಿಸಿ ವಾಡೆಗಳಲ್ಲಿ ಸಾಮೂಹಿಕವಾಗಿ ಭೋಜನ ಸೇವಿಸುತ್ತಾರೆ. ತದನಂತರ ಹಬ್ಬದ ಮುಕ್ತಾಯ ಗೀತೆ ಹೇಳುವು ದರೊಂದಿಗೆ ನವರಾತ್ರಿ ಹಬ್ಬಕ್ಕೆ ತೆರೆ ಎಳೆಯು ತ್ತಾರೆ. ಮುಂಡಗೋಡ ತಾಲೂಕಿನಲ್ಲಿ 36 ದೊಡ್ಡಿ ಗಳಲ್ಲಿ, ಯಲ್ಲಾಪುರ ತಾಲೂಕಿನಲ್ಲಿ 27 ಗೌಳಿ ವಾಡಾಗಳಿದ್ದು, ಸುಮಾರು 10 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದೆ.

ದೀಪಗಳ ಹಬ್ಬ ದೀಪಾವಳಿ ಹಬ್ಬಗಳನ್ನು ಉತ್ತರ ಭಾರತಿಯ ಹಿಂದೂಗಳು ಹೆಚ್ಚಾಗಿ ಸಂಭ್ರಮ ದಿಂದ ಆಚರಿಸುವವರು. ಕರ್ನಾಟಕದ ವಿವಿಧ ಕಡೆ ವಿವಿಧ ರೀತಿಯಲ್ಲಿ ಆಚರಿಸಿದರೆ, ಮಹಾ ರಾಷ್ಟ್ರ ರಾಜ್ಯದಿಂದ ಕರ್ನಾಟಕಕ್ಕೆ ವಲಸೆ ಬಂದು ರಾಜ್ಯದ 08 ಜಿಲ್ಲೆಗಳಲ್ಲಿ ವಾಸವಾಗಿರುವ ದನಗರ ಗೌಳಿ ಜನಾಂಗದವರು ದಸರಾ ಮತ್ತು ದೀಪಾವಳಿ ಹಬ್ಬವನ್ನು ತಮ್ಮ ವಿಶಿಷ್ಟವಾದ ಶೈಲಿಯಲ್ಲಿ ಆಚರಿಸಿ ಸಂಭ್ರಮಿಸುತ್ತಾರೆ. ದೀಪಾವಳಿ ಪಾಡ್ಯದ ಮರುದಿನ ತಾಲೂಕಿನ ಯರೇಬೈಲ್ ಗ್ರಾಮದಲ್ಲಿ ಮೈನಳ್ಳಿ, ಕಳಕೀಕಾರೆ, ಕುದುರೆ ನಾಳ, ಬೆಂಡಿಗಟ್ಟಿ, ಬಸನಾಳ, ಉಗ್ಗೀನ ಕೇರಿ ಮತ್ತು ಯಲ್ಲಾಪುರ ತಾಲೂಕಿನ ಮದ್ನೂರು, ಹುಣಸೆಗೇರಿ, ಹಳಿಯಾಳ ತಾಲೂಕಿನ ಭೀಮನಳ್ಳಿ, ತಟ್ಟಿಹಳ್ಳಿ ಇತ್ಯಾದಿ, ದೀಪಾವಳಿ ಆರಂಭದಿಂದಲೇ ಪುರುಷರು ತಲೆಗೆ ಪೇಟಾ ವನ್ನು ಸುತ್ತಿಕೊಂಡು ಒಂದು ಹೊತ್ತು ಮಾತ್ರ ಹಾಲನ್ನು ಸೇವಿಸಿ 9 ದಿನಗಳವರೆಗೆ ಉಪವಾಸ ವ್ರತ ಮಾಡುತ್ತಾ ತಮ್ಮ ಬಳಿ ಯಾರೆ ಮಾತನಾ ಡಿದರು ಅವರನ್ನು ದೇವಿಯ ರೂಪದಲ್ಲೆ ಕಂಡು ಮಾತನಾಡಿಸುತ್ತಾರೆ.

ದನಗರ ಗೌಳಿಗರು ವಿಜಯದಶಮಿ ಹಬ್ಬವನ್ನು 11 ದಿನಗಳ ಕಾಲ ಆಚರಿಸುತ್ತಾರೆ. ನಿತ್ಯ ಗೌಳಿ ದೊಡ್ಡಿಗಳಲ್ಲಿ ಹೋಮ-ಹವನ,ಪೂಜೆ-ಪುನಸ್ಕಾರ ಗಳು ನಡೆಯುತ್ತವೆ. ಕೆಲ ಗೌಳಿ ಧಾರ್ಮಿಕ ಗುರುಗಳ ಮೇಲೆ ದೇವರು ಬರುತ್ತದೆ. ಹೇಳಿಕೆ ಗಳು ಕೂಡ ನಡೆಯುತ್ತವೆ. ಇಲ್ಲಿ ಬೇಡಿದ್ದು ಈಡೇರುತ್ತದೆ ಎಂಬ ಪ್ರತೀತಿ ಇದೆ. ಮೊದಲು 8 ದಿನ ವಾಡೆಯ ಪ್ರತಿ ಮನೆಯಲ್ಲೊಬ್ಬರಂತೆ ಉಪವಾಸ ವ್ರತ ಮಾಡುತ್ತಾರೆ. ಈ ಸಂದರ್ಭದ ಲ್ಲಿ ನಿತ್ಯ ಮರಾಠಿ ಭಾಷಿಕ ಗೀತೆಯೊಂದಿಗೆ ಗಜ್ಜಾ ಕುಣಿತ ಹಾಗೂ ಪುಗುಡಿ ನೃತ್ಯ ನಡೆಯುತ್ತವೆ. ವಾಡೆಯ ಎಲ್ಲ ಗೌಳಿಗರು ಕಡ್ಡಾಯವಾಗಿ ತಲೆಗೆ ಪಗೋಡಾ ಧರಿಸಿಕೊಂಡು ಕುಣಿಯು ತ್ತಾರೆ. ರಾತ್ರಿವೇಳೆ ಪಂಜಿನ ಮೆರವಣಿಗೆ ಕೂಡ ನಡೆಯು ತ್ತದೆ. 9ನೇ ದಿನ ತಮ್ಮ ತಮ್ಮ ಮನೆಯಲ್ಲಿಯೇ ಹಬ್ಬ ಆಚರಿಸಿ, 10ನೇ ದಿನ ವಾಡೆಯವರೆಲ್ಲ ಸೇರಿ ಸಾಮೂಹಿಕವಾಗಿ ಹಬ್ಬ ಆಚರಿಸುತ್ತಾರೆ. 11ನೇ ದಿನಕ್ಕೆ ಸುತ್ತಮುತ್ತಲಿನ ವಾಡೆಗಳ ಗೌಳಿಗ ರೆಲ್ಲ ಒಂದು ಕಡೆ ಸೇರಿ ಸಿಲೋಂಗ್ ಹಬ್ಬವನ್ನು ಅತಿ ವಿಜೃಂಭಣೆ ಯಿಂದ ಆಚರಿಸುತ್ತಾರೆ.

ವ್ರತ ಮಾಡದೆ ಇರುವವರು ಮನೆಗಳಲ್ಲಿ ಹೈನು ಗಳಿಂದ ತಯಾರಿಸಿದ ಪದಾರ್ಥಗಳನ್ನು ಮಾತ್ರ ಸೇವಿಸುತ್ತಾರೆ. ನಂತರದಲ್ಲಿ ದೀಪಾವಳಿ ಪಾಡ್ಯ ಮರುದಿನದಿಂದ ಧಾರ್ಮಿಕ ವಿಧಿ-ವಿಧಾನಗಳ ಪೂಜೆಯೊಂದಿಗೆ ಆರಂಭಿಸಿ ಸಡಗರದಿಂದ ಆಚರಿಸಿ ಸಂಭ್ರಮಿಸುತ್ತಾರೆ. 12ನೇ ದಿನ ತಮ್ಮ ಜನಾಂಗದ ವಿಶಿಷ್ಟವಾದ ಉಡುಗೆ-ತೊಡಿಗೆ ಧರಿಸಿ ಮುಂಜಾನೆ 4 ಗಂಟೆಯಿಂದ ಪಾಂಡು ರಂಗ ದೇವಸ್ಥಾನದ ಮುಂದೆ ಕುಣಿದು, ಕುಪ್ಪಳಿಸಿ ಸಂಭ್ರಮಿಸುತ್ತಾರೆ. ಈ ವೇಳೆಯಲ್ಲಿ ಕೆಲವರ ಮೇಲೆ ದೇವರು ಆವರಿಸಿ ತಲವಾರು ಗಳಿಂದ ಹೊಟ್ಟೆಗೆ ಚುಚ್ಚಿಕೊಳ್ಳುತ್ತಾ ದೊಡ್ಡಿಗೆ ಸಂಬಂಧಿ ಸಿದ ಹೇಳಿಕೆಗಳನ್ನು ಮಾರಾಠಿ ಭಾಷೆಯಲ್ಲಿ ಹೇಳುತ್ತಿರುತ್ತಾರೆ. ಗೌಳಿ ಜನಾಂಗ ದವರು ವಿಶಿಷ್ಟ ರೀತಿಯ ಸಾಂಪ್ರದಾಯಿಕ ಉಡಿಗೆ ತೊಟ್ಟು ಹೈನ ದಿಂದ ಅಭಿಷೇಕ ಮಾಡಿಕೊಳ್ಳುತ್ತ ಮಹಿಳೆಯರು ಪುಗಡಿ ನೃತ್ಯ, ಪುರುಷರು ಗಜ್ಜಾ , ಸಿಲಾಂಗನಾ ನೃತ್ಯಗಳನ್ನು ವೃತ್ತಾಕಾರದ ಗುಂಪಿನಲ್ಲಿ “ಹರ ಹರ ಚಂಗಬೋಲಾ… ಚಂಗಬೋಲಾ” ಎಂಬ ಹಾಡನ್ನು ಹಾಡುತ್ತ ಕುಣಿಯುವರು. ಈ ರೀತಿಯ ಆಚರಣೆ ನಮ್ಮ ಪೂರ್ವಜರು ಆಚರಿಸಿ ಕೊಂಡು ಬಂದು ಅದನ್ನೇ ನಾವು ಮುಂದುವರಿಸಿ ಕೊಂಡು ಹೋಗುತ್ತಿದ್ದೇವೆ. ಇದು ನಮಗೆ ಶ್ರೇಷ್ಠ ವಾದ ಹಬ್ಬವೆಂಬ ಅಭಿಪ್ರಾಯವಿದೆ.

ಶ್ರೀಪಾಂಡುರಂಗ ಮುಗ್ಧ ದನಗರ ಗೌಳಿಗರ ಆರಾಧ್ಯ ದೈವ. ಇವರು ಆರಂಭದಲ್ಲಿ ಇತರೆ ಜನಾಂಗದವರೊಂದಿಗೆ ಬೆರೆಯಲು ಹಿಂಜರಿದು, ದಿನಕಳೆದಂತೆ ಕನ್ನಡಿಗರ ಜೊತೆಯಲ್ಲಿ ಬೆರೆಯುತ್ತ ವ್ಯವಹಾರಿಕ ಜೀವನ ಸಾಗಿಸಲು ಪ್ರಾರಂಭಿಸಿ ದ್ದಾರೆ. ಈ ಜನಾಂಗದ ವರಿಗೆ ಇಂದಿಗೂ ತಮ್ಮ ಮಾತೃ ಭಾಷೆ ಮರಾಠಿ ಬಿಟ್ಟರೆ ಭಾಷೆ ಬಿಟ್ಟರೆ ಬೇರೆಭಾಷೆಯಲ್ಲಿ ಮಾತನಾಡಲು ಬರುವುದಿಲ್ಲ. ಬಹುಷ: ಈಕಾರಣದಿಂದಲೇ ಇತರರ ಜೊತೆ ಬೆರೆಯಲು ಇಂದಿಗೂ ಸಾಧ್ಯವಾಗುತ್ತಿಲ್ಲ. ಇವರು ಆರ್ಥಿಕವಾಗಿ ಇನ್ನು ಸುಧಾರಿಸಬೇಕಾಗಿದೆ.
✍️ಶ್ರೀಮತಿ.ಶಿವಲೀಲಾ ಹುಣಸಗಿ
ಶಿಕ್ಷಕಿ, ಯಲ್ಲಾಪೂರ
Hi
LikeLiked by 1 person
Nice madam
LikeLike
Nice article..very Devine.. nam belagavi hatra iruva devarige hege heli banda padati ..chinchali mayaka changa balo , savadati yallam changabalo..itara helude vandu kushi..Vanda sadagara..Nima article nali adana odi tumba kushi koti..
LikeLike