ನೋಡಿದೆ ನಾ ಅವಳನ್ನ
ಹೊತ್ತು ಮುಳುಗದ ಮುನ್ನ
ಹಾಕಿದಳು ಎನ್ನದೆಗೆ ಕನ್ನ
ಕೊಟ್ಟು ಬಿಟ್ಟೆ ಮನಸನ್ನ

ಮುಂಗುರಳ ಮುದ್ದು ಮಲ್ಲೆ
ಕಳೆದು ಹೋದೆನು ಅಲ್ಲೆ
ಸಿಗದಾಯಿತು ಮನಕೆ ಎಲ್ಲೆ
ಹೇಳದಾದೆನು ನಾನೊಲ್ಲೆ

ಬಣ್ಣ ಗೋದಿ ಕೆಂಪು
ಮನಸ್ಸಿಗಾಯಿತು ತಂಪು
ಹರಡಿತು ಹೃದಯದಿ ಕಂಪು
ಮಾಡದಾದೆನು ರಂಪು

ಕಣ್ಣಂಚ ಕಾಡಿಗೆ ಕಪ್ಪು
ನೋಡಿ ಆದೆ ನಾ ಬೆಪ್ಪು
ಆಗಿ ಹೋಯಿತು ತಪ್ಪು
ಮುಚ್ಚಿದೆ ಬಾಯಿ ಗಪ್ಪು

ಸರಳ ಸುಂದರ ಸಂಸಾರ
ಜೀವನದಿ ಎಲ್ಲವೂ ಸಸಾರ
ಒಬ್ಬರಿಗೊಬ್ಬರು ಆಸರ
ಅವಳೊಂದಿಗಿಲ್ಲ ಬೇಸರ

✍️ವಿ.ಎಚ್.ಕೆ.ಹಿರೇಮಠ.
ಗದಗ