ಸಂಕ್ರಾಂತಿ ಬಂತರಿ…..ಸಂಕ್ರಾಂತಿ
ಹಳ್ಯಾಗ ಏನ ಚಂದಾನ ಚಂದರಿ…
ರೈತರಿಗೆ ಇದು ಸುಗ್ಗಿ ಹಬ್ಬರಿ…
ಎತ್ತುಗಳ ಸಿಂಗಾರ…
ನಮ್ಮ ಹೆಣ್ಣು ಮಕ್ಕಳ ಮೈಮ್ಯಾಲ ಬಂಗಾರ…
ಹೊಸ ಬಟ್ಟಿಯ ಅಲಂಕಾರ..
ಎಳ್ಳ ಹಚ್ಚಿದ ಸೆಜ್ಜಿ ರೊಟ್ಟಿ
ಎಳ್ಳ ಚಣ್ನಿ ಕೆನಿ ಮೊಸರು
ತಟಕ ಬೆಣ್ಣಿ ಮುದ್ದಿ…
ಗೋದಿ ಹುಗ್ಗಿ ಕರಚಿಕಾಯಿ..
ಎಳ್ಳು ಬೆಲ್ಲಾ ತಿಂದು ಊರಿಗೆಲ್ಲಾ .ಸಿಹಿ ಸಿಹಿಯಾಗಿ ಹಂಚಿ..
ಸಿಹಿ ಸಂಬ್ರಮದಾಗ ಮಿಂಚಿ
ಸಿಟ್ಟು ಸೆಡವ ಎಲ್ಲಾ ಬಿಟ್ಟು
ಖುಷಿ ಖುಷಿಯಾಗಿ ಇರಬೇಕು ಮನೆಯವರ ಜೊತೆ ಯಾವತ್ತು…
ದಕ್ಷಿಣಾಯಣ ಕಳೆದು ಉತ್ತರಾಯಣ ಬಂತು
ಸೂರ್ಯದೇವ ಪಥ ಬದಲಿಸಿ ಮಕರ ರಾಶಿಗೆ ಬಂದಾ ಎಂಥಾ ಸುಯೋಗ ಬಂತು
ಆದರ ಈ ಮಾನವರು ನಾನು ನನ್ನದು ಎಂಬ ಅಹಂಕಾರ ಬಿಟ್ಟು ಮಾನವಿಯತೆ ಇಂದ ಇದ್ದರ ಎಂಥ ಸುಂದರ ಬದುಕು

✍️ಗೋಪಾಲ ಕ ದೇಶಪಾಂಡೆ
ಹುಬ್ಬಳ್ಳಿ