ಇಳೆಗೆ ಬಂತು ಸಂಕ್ರಾಂತಿ.
ಅಂಬರದಾ‌ ತೇರಲಿ ಉದಯ
ಸೂರ್ಯ
ಸಂಭ್ರಮದಾ‌ ಉತ್ತರಕೆ ತೇಜ‌ಕಿರಣ‌ ಪ್ರಖರದ‌ ಶೌರ್ಯ

ಜಗದ‌ಜೀವ ಜೀವನ ಸಂಜೀವನಾಗಿ
ಚೈತನ್ಯೆ‌ ಅರಳಿಸಿ ಸಂತಸ
ಚಿಲುಮೆ ಆಗಿ
ಭೂಮಡಿಲ‌ಫಲರಾಷಿ
ಸಮ್ರದ್ಧಿ ಹಾಸಿ
ಮಣ್ಣಿನ ಮಕ್ಕಳ ಬೆವರ
ಶ್ರಮಕೆ‌ ಶಾಂತಿ ಹರಿಸೀ

ಒಕ್ಕಲಜೀವ‌ ಕಕ್ಕುಲತೆ ತುಂಬಿ
ಬಿಕ್ಕದಂತೆ ಉಸಿರಾಗಿ ನಂಬಿ
ಪ್ರತ್ಯಕ್ಷ‌ ದೈವನಾಗಿಹ ಭವದಲಿ
ಆರಾಧಿಸುವ ಮನದ ಕಣ್ಣಲಿ

ವನ‌ಹೊಲ‌‌ ರಾಶಿ ಫಲ ತುಂಬಿದೊಡಲು
ನದಿಜಲ ಬೆಟ್ಟತಪ್ಪಲು
ಮೈತುಂಬುಝುಳಝುಳು
ಎಲ್ಲೆಲ್ಲೂ ನೇಸರು ಹಸಿರೇ
ಹೊದ್ದು ನಿಂತಿಹಳು
ಕಬ್ಬುತೆಂಗು ಬಾಳೆ
ಎಳ್ಳು ಶೇಂಗಾ ಮಿಶ್ರಣಗಳು

ಮರೆಸುವವು‌ನೋವುಗಳು
ಹರಸುವವು ಜೀವಸಂಕುಲ ಗಳು
ಮುದುಡಿದ ಚಳಿಯ ಕೊರೆದು
ದೇಹ ಸುಕ್ಕುಗಳು
ಸಮಸೀತೋಷ್ಣದಂತೆ ನಗು ಅಳು
ಮೂಡಿರಲಿ ಮ್ರಢಮನದ
ಗಟ್ಟಿ ಜೀವಾಂಕುರಗಳು
ಬಾಡದಿರಲಿ ಬಾಳ ಕುಸುಮ
ಶಿಶಿರ ತಾಪಕೆ
ಏರಿಳಿವ ಬಂಡೆ‌ಹಿಮರಾಶಿಗಳುಕಲಿಸಿವೆ
ಉಣಿಸಿ ಹಿತವ ಬೋಧೆ

ಈಗಲೇ ಉಂಡುಡುವೆ ಜೀವ
ನಾಳಿಗೆಂಬುದಿಲ್ಲ
ಸೂರ್ಯೋದಯ ಸೂರ್ಯಾಸ್ತ
ಭರವಸೆ ಮೋದಲಿಲ್ಲ
ಜಗನಿಯಮ ಬಾಳ ಚಿತ್ರಗಳೂ
ವಿಧಿಯಾಟ ಬರೆದು ಅಳಕಿಸುವ
ಮಕ್ಕಳಾಟ ದಂತೆ ಇಂದು ನಾಳೆಗಳು..

✍️ಶ್ರೀಧರ.ಭ.ಸತ್ತಿಗೇರಿ
ಹುಬ್ಬಳ್ಳಿ