ಹೊಸತು ಹೊಳೆಯಲು ಹಳೆಯ ತಳಹದಿ ಬೇಕು/
ಹೊಸತು ಚಿಗುರಲು ಹಳೆಯ ಬೇರಿನ ಬಲ ಸಾಕು/

ಕಾಲದ ಓಟಕ್ಕೆ ತಕ್ಕಂತೆ ಬದುಕು,ಬರಹ ಚಿಂತನೆ,ಜೀವನ/
ಕಾಲಕ್ಕೆ ತಕ್ಕಂತೆ ಬದಲಾಗದಿರೆ ಓಡದು ಬದುಕ ಸಂವಹನ/

ಹಳೆಯದೆಲ್ಲ ಪ್ರಕೃತಿಯಲ್ಲಿ ದೊರಕಿರುವಂತೆ/
ರಸಾಯನಿಕಗಳ ಸಂಯೋಗ ಮಿಶ್ರಣ ಹೊಸತು ವಿಜ್ಞಾನವಂತೆ/

ಔಷಧಿ ಲೇಪಿಸಿ ಹಣ್ಣು ಮಾಡುವುದಲ್ಲ ಹಳೆಯ ಚಿಂತನೆ/
ಪ್ರಾಕೃತಿಕವಾಗಿ ಫಲಿತು ಮಾಗಿ ಹಣ್ಣಾಗಬೇಕು ಅಡ್ಡಪರಿಣಾಮವಿಲ್ಲದ ಸೇವನೆ/

ಮನಮೋಹಕ, ಶಾಂತ ಸೃಷ್ಟಿ , ಎಲ್ಲರಿಗೂ ಒಳಿತು ಹಳತು/
ಕಣ್ಣು ಕುಕ್ಕಿಸಿ,ಝಗ ಝಗಿಸಿ ಕೋರೈಸಿ ಕುರುಡಾಗಿಸಿ ಧಗಧಗಿಸುವುದು ಹೊಸತು/

ಹಳತು ಹೊಸತಿನ ಸಮನ್ವಯದಲಿ ಸಾಗಲಿ ಬದುಕು/
ಒಳಿತೆನೆಡೆ ಮುನ್ನಡೆಯಲಿ ಹಳೆ-ಹೊಸ ವಿಚಾರಗಳ ಪಲುಕು/

✍️ಶ್ರೀಮತಿ ರೇಖಾ ನಾಡಿಗೇರ
ಹುಬ್ಬಳ್ಳಿ