ಹಬ್ಬ ಹಬ್ಬ ಹಬ್ಬ ಸುಂದರಾ ಬಲು ಸುಂದರಾ ಹಬ್ಬ ಸಂಕ್ರಾಂತಿ ಹಬ್ಬ ಸುಂದರಾ ಬಲು ಸುಂದರಾ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡಲು ಕಲಿಸುವ ಹಬ್ಬ ಸಂಕ್ರಾಂತಿ ಹಬ್ಬ.


ರೈತರು ಬೆಳೆದ ಬೆಳೆಗಳ ಬಳಸಿ ವಿಧ ವಿಧ ಅಡುಗೆ ತಯಾರಿಸಿ ಸಂಭ್ರಮಿಸುವ ಈ ಹಬ್ಬ ಸಂಕ್ರಾಂತಿ ಅನ್ನದಾತನ ಮೊಗದಲಿ ಸಂಭ್ರಮದ ಕಾಂತಿ ಸಂಕ್ರಾಂತಿ ಹಬ್ಬ ಬಂತು ರೈತರಿಗೆ ಖೂಷಿಯೂ ತಂತು.


ಹೊಸ ಬಟ್ಟೆ ಧರಿಸೋಣ‌ ಎಳ್ಳು ಬೆಲ್ಲ ಹಂಚೋಣ ಒಳ್ಳೋಳ್ಳೆ ಮಾತು ಉಲಿಯೋಣ ಎತ್ತುಗಳ ಸಿಂಗರಿಸಿ ಮೆರವಣಿಗೆ ಮಾಡುತ ಸಂಕ್ರಾಂತಿ ಹಬ್ಬ ಸಂಭ್ರಮಿಸೋಣ ರಾಶಿ ಪೂಜೆ ಮಾಡಿ ನಲಿಯೋಣ ದುಡಿಯೋಣ ಬನ್ನಿ


ಸಜ್ಜಿ ರೊಟ್ಟಿ ಎಣ್ಣೆ ಬದನೆಕಾಯಿ ಶೇಂಗಾದ ಹೋಳಿಗೆ ಕಬ್ಬು ಸುಲುಗಾಯಿ ತಿನ್ನಲೇಬೇಕಾದ ಈ ಹಬ್ಬ ಸಂಕ್ರಾಂತಿ ವಿಧ ವಿಧ ಅಡುಗೆ ತಯಾರಿಸಿ ಸಂಭ್ರಮಿಸುವ ಹಬ್ಬ ಸಂಕ್ರಾಂತಿ ಹಬ್ಬ.


ಸಂಕ್ರಾಂತಿಯಂದು ಎಳ್ಳು ಬೆಲ್ಲ ಸವಿದು ಸಕಲರಿಗೂ ಶುಭವನ್ನು ಕೋರುತ್ತಾ ಸಂಭ್ರಮಿಸುವ ‌ಹಬ್ಬ ಭೂಮಿ ತಾಯಿ ಋಣವ ತೀರಿಸೋಣ ಸಡಗರದ ಸಂಕ್ರಾಂತಿ ಹಬ್ಬ ಮಾಡೋಣ ಧಾನ್ಯದಾನ ಮಾಡಿ ಧನ್ಯರಾಗೋಣ.

✍️ಶ್ರೀಮತಿ. ವಂದನಾ. ಆರ್. ಕರಾಳೆ. ಹುಬ್ಬಳ್ಳಿ.