ಬದುಕ ನಡೆಸಲು ನಡೆದಿದೆ ನಿತ್ಯವೂ ಕ್ರಾಂತಿ
ಇರುಳss ಕಳೆದು ಬೆಳಕು ತರುವ ದಿನಕರ
ತನ್ನ ಪಥವss ಬದಲಿಸುತ ಬರುವ ಹೊತ್ತು
ಹೊಸತುss ದಿನವ ತರುವss ಸಂಕ್ರಾಂತಿ.

ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ,ಭರತ
ಸಜ್ಜೆ ರೊಟ್ಟಿ, ಬುತ್ತಿಯ ಕಟ್ಟಿ, ಬಂಡೆ ಹೂಡಿ
ಎತ್ತಿನ ಕೊರಳಿನ ಗೆಜ್ಜೆಯ ನಾದವದು ಘಲ್
ಘಲ್ ಸದ್ದು ನೆನಪಿಸಿದೆ ಆ ದಿನದ ಸಂಕ್ರಾಂತಿ.

ಬಡತನದ ಬೇಗೆಯಿರಲೂ ಹಸಿವೆಂಬ ಹೊಗೆ
ಆಡುತಿರಲುss ಮೊಗದ ಮೇಲೊಂದು ಸಣ್ಣ
ಮುಗುಳ್ನಗುವ ಮೂಡಿಸಿದ ಬದುಕಿನ ಕ್ರಾಂತಿ
ಚಿಕ್ಕ ಚಿಕ್ಕದರಲ್ಲಿ ಖುಷಿ ಪಟ್ಟ ದಿನ ಸಂ-ಕ್ರಾಂತಿ.

ಅಪ್ಪನಿಲ್ಲದ ಸಂಕ್ರಾಂತಿಯ ನೆನೆದು ತೋಯ್ದ
ಅವ್ವನ ಕಂಗಳು ಮಕ್ಕಳಿಗಾಗಿ ಹಿಗ್ಗಿs ಹೀರಿss
ಅಡುಗೆ ಮಾಡಿದ ದಿನವದು ಸಂಭ್ರಮದ ಕ್ರಾಂತಿ
ಎಲ್ಲಿ ಮಾಯವಾಯಿತು ಆ ದಿನದ ಸಂಕ್ರಾಂತಿ.

ಇಗೋss ಅಂದಿನಂತೆ ಇಂದು ಮತ್ತೆs ಮರಳಿ
ಬಂದಿದೆ ಸಂಕ್ರಾಂತಿ ಚುಮು ಚುಮು ಚಳಿಯಲಿ
ಮೋಡದ ಮರೆಯಲಿ ಸೂರ್ಯ ಇಣುಕುತಿರುವ
ಹೊಸ ಕನಸುಗಳ ಹೊತ್ತು ತಂದ ದಿನ ಸಂಕ್ರಾಂತಿ.

✍🏻ಕಲ್ಪನಾ ಎಸ್ ಪಾಟೀಲ್
ಕೆರೂರು, ಜಿ:ಬಾಗಲಕೋಟೆ