ಮತ್ತೆ ಬಂದಿದೆ ಸಂಕ್ರಾಂತಿ ಹಬ್ಬ
ಹೊಸ ವರ್ಷದ ಮೊದಲ ಹಬ್ಬ
ಸೂರ್ಯನ ಪಥ ಬದಲಾವಣೆ
ತರುವುದು ಜಗದಲಿ ಪರಿವರ್ತನೆ

ರೈತರಿಗೆ ಹಿಗ್ಗಿನ ಸುಗ್ಗಿಯ ಕಾಲ
ವರ್ಷಪೂರ್ತಿ ಪರಿಶ್ರಮಪಟ್ಟ ಫಲ
ರಾಶಿ ಮಾಡುವರು ಬೆಳೆದ ಫಸಲ
ಕುಣಿಯುತ ಹಾಡುತ ಕಿಲಕಿಲ

ಇಳೆ ನಡುಗಿಹಳು ಮಾಗಿಯ ಚಳಿಗೆ
ಬಯಸಿಹಳು ನೇಸರನ ಬಿಸಿಯಪ್ಪುಗೆ
ಪಕ್ಷಿಗಳು ಗೂಡಿನಿಂದ ಬಾನಿನೆಡೆಗೆ
ಮುದುಡಿದ ನವಿಲು ಸಜ್ಜಾಗಿದೆ ನರ್ತನೆಗೆ

ಸಂಕ್ರಾಂತಿಯ ಮುನ್ನಾ ದಿನ ಭೋಗಿ
ಮಾದಲಿ ಶೇಂಗಾ ಎಳ್ಳಿನ ಹೊಳಗಿ
ಸಜ್ಜಿ ರೊಟ್ಟಿ ಕಾಳುಪಲ್ಯ ಚಟ್ನಿ ಮೊಸರು
ಹರುಷದಲಿ ಉಂಡು ಸಂಭ್ರಮಿಸುವರು

ಒಬ್ಬರಿಗೊಬ್ಬರು ಎಳ್ಳು ಬೆಲ್ಲ ಹಂಚುತ
ಅಸೂಯೆ ದ್ವೇಷವನು ಮರೆಯುತ
ಸಿಹಿ ಸಿಹಿ ಮಾತುಗಳನಾಡುತ
ಸಂಭ್ರಮಿಸುವರು ಸಂಕ್ರಾಂತಿ ಆಚರಿಸುತ

✍️ಜಯಶ್ರೀ ಎಸ್ ಪಾಟೀಲ
ಧಾರವಾಡ