ವರ್ಷಪೂರ್ತಿ ನಡೆದರೂ ಎಷ್ಟೆಲ್ಲ ಹೆಜ್ಜೆಗಳು ಬಾಕಿ ಉಳಿದವು
ನಡೆದಂತೆಲ್ಲ ಹೆಜ್ಜೆಗೊಂದು ದಾರಿಗಳು ಮತ್ತೆ ತೆರೆದುಕೊಂಡವು

ಹಿಂದೆ ತಿರುಗಿ ನೋಡಲು ಕನ್ನಡಿಗೂ ಅಚ್ಚರಿಯ ಮೇಲೆ ಅಚ್ಚರಿ
ಭೂತ ಭವಿಷ್ಯತ್ತು ವರ್ತಮಾನದ ಕಣ್ಣೀರು ಕೂಗಿ ಕರೆದವು

ಆವೇದನೆ ಹದ್ದು ಮೀರಿ ಹೃದಯ ರೋಧಿಸಿದರೂ ಕತ್ತಲು
ಮನಸು ಮಹಾಯಜ್ಞಕೆ ಕುಳಿತು ಮನೋಭಿತ್ತಿ ಮುಷ್ಕರ ಹೂಡಿದವು

ಇಲ್ಲ ತೆರೆ ಇಲ್ಲದ ಪ್ರಪಂಚಕೆ ಬಂದಾಗಿದೆ ಪರದೆಯ ನೆರಳು
ಹಿಡಿದರೆ ಜಿಗಿಯುವ ಬಿಟ್ಟರೆ ಹಾರುವ ಸಂಯಮ ದುಬಾರಿಯಾದವು

ಧರ್ಮದನಾಗರಿಕತೆಗೆ ನರಸತ್ತುಹೋಗಿದೆ ಈ ಜೀವ ಜಾಲಿ
ಮನಸನೇ ಕೊಂದ ಮೇಲೆ ಮನುಜನ ಕಥೆಗಳು ರಕ್ತಕಾರಿದವು

✍️ವೇಣು ಜಾಲಿಬೆಂಚಿ
ರಾಯಚೂರು.