ಆನೆ ನಡೆದದ್ದೇ ದಾರಿ
ಕವಿ ಬರೆದದ್ದೇ ಕವನ
ಕವಿ ಓದಿದರೆ ಕವನ ವಾಚನ
ಸ್ವಾಮೀಜಿ ಮಾತನಾಡಿದರೆ ಪ್ರವಚನ ಆಶೀರ್ವಚನ

ರಾಜಕಾರಿಣಿ ಮಾತನಾಡಿದರೆ ಭಾಷಣ
ರಾಜಕಾರಿಣಿಗಳು ಕೂಡಿದರೆ ರಾಜಕೀಯ
ಕವಿಗಳು ಕೂಡಿದರೆ ಕವಿಗೋಷ್ಠಿ
ಅರವಳಿಕೆ ತಜ್ಞ ವೈದ್ಯರು ಕೂಡಿದರೆ ಶಸ್ತ್ರ ಚಿಕಿತ್ಸೆ

ಶಿಕ್ಷಕರು ಕೂಡಿದರೆ ಪಾಠ
ಮಕ್ಕಳು ಕೂಡಿದರೆ ಆಟ
ಕಲಾವಿದರು ಕೂಡಿದರೆ ನಾಟಕ
ಸತಿ ಪತಿಗಳು ಕೂಡಿದರೆ ಸಂಸಾರ

ದೀಪದಿಂದ ದೀಪ ಬೆಳೆಗಿದರೆ ದೀಪಾವಳಿ
ಕೈಯಿಂದ ಬಾಯಿ ಬಾಯಿ ಬಡಕೊಂಡರೆ ಹೋಳಿ
ಹನಿ ಹನಿ ಕೂಡಿದರೆ ಹಳ್ಳ
ತೆನೆ ತೆನೆ ಕೂಡಿದರೆ ರಾಶಿ
ಕೈ ಕೈ ಕೂಡಿದರೆ ಚಪ್ಪಾಳೆ

ಮರಗಳ ಎಲೆಗಳು ಚಿಗರಲು ವಸಂತ ಋತು
ಮರಗಳ ಎಲೆಗಳು ಉದರಲು ಶಶಿರ ಋತು
ಸೊಸೆ ಅತ್ತೆ ಮನೆಯಿಂದ ಕಾಲ್ಕಿತ್ತರೆ ಗಂಡನಿಗೆ ಆಷಾಢಮಾಸ
ಮಗಳು ಗಂಡನ ಮನೆಯಿಂದ ತವರಿಗೆ ಬಂದರೆ ಶ್ರಾವಣ ಮಾಸ
ಸರಸವೇ ಜನನ
ವಿರಸವೇ ಮರಣ
ಸಮರಸವೇ ಜೀವನ

✍️ ಶ್ರೀನಿವಾಸ ಪಾಟೀಲ, ಕಡಿವಾಲ
ಕಲ್ಯಾಣ ನಗರ, ಧಾರವಾಡ