ಆಯುಷ್ಯದ ಒಂದು ವರುಷ
ಕಳೆಯಿತಲ್ಲಾ ಎಂಬ ಚಿಂತೆ….
ಏಕೆ ಚಿಂತೆ ನಾನಿಲ್ಲವೆ ನಿಮ್ಮ ಚಿಂತೆ ಬಿಡಿಸುವ ಪ್ರಾಣ ಕಾಂತೆ..
ಎಂದು ದೈರ್ಯ ತುಂಬಿದಳು ನನ್ನವಳು….
ಪ್ರಾಣ ಕಾಂತಾ ಕಳೆದ ವಷ೯ವು ಮಾಡಿಸಲಿಲ್ಲಾ ಹೊಸ ಬಂಗಾರದ ದಾಗೀನು
ಈ ವರುಷವಾದರು ಹಷ೯ದಿ ಮಾಡಿಸುವಿರಾ..ದಾಗೀನು. ಎಂದು ಮೆಲ್ಲನೆ ದ್ವನಿ ಸುರುಳಿ ಬಿತ್ತರಿಸಿದಳು…
ನಾನೆಂದೆ ಕೇಳಿರುವೆಯಾ ಚಿನ್ನದ ದರ..ನನ್ನ ಚಿನ್ನಾ ಎಂದೆ…..
ನಮ್ಮ ಮದುವೆಯಾದ ಹೊಸತರಲಿ ಬಂಗಾರದ ಬೆಲೆ ಎರಡು ಸಾವಿರದ ಒಳಗಿತ್ತು..
ಆಗಲೆ ಬಡಕೊಂಡೆ ಒಂದೆರಡು ಕೆ ಜಿ ಕೊಳ್ಳಿರೆಂದು…
ಆಗಲೂ ಅದೇ ಮಾತು ಇಗಲೂ ಅದೇ ಮಾತು…
ಮಾತು ಮುತ್ತಾಯಿತು ಮುತ್ತು ಕೆನ್ನೆಯಲಿ ಉಳಿಯಿತು…
ನಗು ತುಂಬಿತ್ತು ಆ ನಗುವಿನ ಅಲೆಯಲಿ ದೂರದಿ ಪಾಟಾಕಿಯ ಸದ್ದು….
೨೦೨೩ ಬಂದಾಗಿತ್ತು
ಗೋಡೆಗೆ ಹೊಸ ಕ್ಯಾಲೆಂಡರ್ ನೆತ್ತಾಡುತ್ತಿತ್ತು….
೧-೧-೨೦೨೩ ರವಿವಾರ ದಿನ ಪತ್ರಿಕೆ ಬಾಗಿಲಲಿ ಇತ್ತು ೨೦೨೨ರ ಸುದ್ದಿ ಹೊತ್ತು

✍️ಗೋಪಾಲ ಕ ದೇಶಪಾಂಡೆ
ಹುಬ್ಬಳ್ಳಿ