ಹೋಗುವೆಯಾ ನೀನು ಇಪ್ಪತ್ತೆರಡು
ಹಳೆ ಕಡತಕ್ಕೆ ಹೊಸತನದ ಜೋಡು
ಎರಡಕ್ಕೆ ಜೋಡಿಯಾದೆ ನೀ ಮೂರು
ಕರೆಯಕ್ಕೆ ಇಪ್ಪತ್ತನೂರಾ ಇಪ್ಪತ್ಮೂರು//

ಹೊತ್ತು ತಾ ನೀ ಕನಸುಗಳ ನೂರು
ಎಳೆಯುತ ಬಾ ನೀ ಸಂಭ್ರಮದ ತೇರು
ಭವ ಬಾಂಧವದೊಳು ತಾ ಸಡಗರ
ಕಟ್ಟು ಕೊರಳಿಗೆಲ್ಲ ಸಾಮರಸ್ಯದ ಸರ//

ತಪ್ಪು ಒಪ್ಪುಭಾವದಲಿ ಬರಲಿ ಲಾಸ್ಯ
ನೋವು ನಲಿವಿನಲಿ ಮೂಡಲಿ ಹಾಸ್ಯ
ನೆರಳ ಬೆಳಕಿನಾಟದಲಿರಲಿ ನವ ವಿನ್ಯಾಸ
ಚಿಗುರಲಿ ಹಳೆಬೇರಿನೊಂದಿಗೆ ಹೊಸ ಸಸ್ಯ//

ಮೌನ ಧ್ಯಾನದಲಿ ಹರಸುತಿರಲಿ
ಮಾನವೀಯ ಮೌಲ್ಯ ಸರತಿ ಯಲಿ
ಜಗದ ಜೋಳಿಗೆ ತುಂಬಿ ತುಳುಕಲಿ
ಪ್ರೀತಿ ಪ್ರೇಮ ಐಕ್ಯತೆಯ ಸೆಳೆತದಲಿ//

✍️ರೇಮಾಸಂ
(ಡಾ.ರೇಣುಕಾತಾಯಿ ಸಂತಬಾ)
ಹುಬ್ಬಳ್ಳಿ