ಬದುಕಿನುದ್ದಕ್ಕೂ ಬಿಸಿಲ ಬೇಗೆಯಲ್ಲಿ ಬೆಂದು
ರಭಸದಿಂದ ಬೀಳುವ ಮಳೆಯಲ್ಲಿ ಮಿಂದರು
ದಣಿದು ಬಂದ ಮಾನವನಿಗೆ ಆಶ್ರಯ ನೀಡಿ
ಸಲುಹಿದ ಸಾರ್ಥಕತೆಯಲ್ಲಿ ಬದುಕಿರುವೆ
ಚಂದಿರನ ಚಂದದ ರಾತ್ರಿಯೊಳು
ಕಳೆದುಹೊದ ನೆನಪುಗಳನ್ನ
ಮೇಲಕುಹಾಕುತ್ತ ಮತ್ತೆ ಚಿಗುರುವೆನೆಂಬ
ಭರವಸೆಯೊಂದಿಗೆ ಕಾದು ಕುಳಿತಿರುವೆ
ಬದುಕು ಬರಡಾದರೇನಂತೆ
ಕತ್ತಲೆಯಲ್ಲಿ ನಗುವ ಚಂದಿರನ
ನೋಡಿ ಚಂದದ ಕನಸ ಕಾಣುತ್ತ
ಬರುವ ಹೊಸ ನಾಳೆಗಾಗಿ ಬದುಕಿರುವೆ
ಹೊಸವರ್ಷದ ಹೊಸ್ತಿಲಲ್ಲಿ ನಿಂತು
ಕಳೆದು ಹೋದ ಕಹಿ ನೆನಪುಗಳನ್ನ ಮರೆತು
ಚಂದಿರನ ಹೊಳಪಂತೆ ಬದುಕನ್ನ ಹೊಳಪಾಗಿಸುವ
ನವ ಭರವಸೆಗಳ ಹೊತ್ತು ಕಾದು ಕುಳಿತಿರುವೆ
ಪಲ್ಲವಿ~

✍️ಪಲ್ಲವಿ ದಿವಾಕರ
ಅಂಕೋಲ