ನೀರಿಲ್ಲದ ಬಾವಿಯಲಿ
ನೀರನು ಹುಡುಕಲು ಹೋಗಿ
ಮರುಗಬೇಡಾ ಮನವೆ
ಮರಭೂಮಿಯ ಗಿಡಮರಗಳ ನೋಡು
ಮಳೆರಾಯ ಬರುವನೆಂಬ ನಂಬಿಕೆಯಲಿ
ಕತ್ತಲು ಕವಿದಿದೆ
ದಾರಿ ಹುಡುಕಲು ಹೋಗಿ
ಎಡವಬೇಡ, ಸ್ವಲ್ಪ ತಾಳ್ಮೆ ಇರಲಿ
ಸೂರ್ಯ ಬಂದೆ ಬರುತ್ತಾನೆ
ಆವಾಗ ತಿಳಿಯುತ್ತೆ
ಎಷ್ಟು ದಾರಿಗಳಿವೆ ಅಂತಾ
ಮಾಡಿದ ತಪ್ಪನ್ನು ನೆನೆದು
ಮತ್ತೆ ಮತ್ತೆ ಅವಘಡ ಬೇಡ
ತಪ್ಪನ್ನು ಅರಿತು ಅರಿವಿನಂತೆ ನಡೆ
ಬಾಳು ಬೆಳಕಾಗಲಿ ಮನವೆ

✍️ವಿದ್ಯಾ ಭಗವತಿ
ಬಿ,ಎಸ್,ಸಿ, ತೃತೀಯ ವರ್ಷ
ಪಿ.ಸಿ.ಜಾಬಿನ್ ಕಾಲೇಜು ಹುಬ್ಬಳ್ಳಿ
ಸಾ: ಕಲಘಟಗಿ
ಅರ್ಥಪೂರ್ಣವಾದ ಸಾಲುಗಳು
ಸೂಪರ್
LikeLiked by 1 person