ಒಂದು ದಿನದಲ್ಲಿ ಸಾಲಿಗ್ರಾಮವನ್ನು ಹೊಂದಿದ ಮೂರು ಆಂಜನೇಯ ದೇವಾಲಯಗಳನ್ನ ದರ್ಶನ ಮಾಡಿದರೆ ಹನುಮನ ಆಶಿರ್ವಾದ ಸಿಗುವುದು ಎಂಬ ನಂಬಿಕೆ ಭಕ್ತರಲ್ಲಿ ಇದೆ. (ಕದರಮಂಡಲಗಿ ಕಾಂತೇಶ, ಸಾತೇನಹಳ್ಳಿ ಶಾಂತೇಶ ಮತ್ತು ಶಿಕಾರಿಪುರದ ಬ್ರಾಂತೇಶ). ಇವುಗಳಲ್ಲಿ ಕದರಮಂಡಲಗಿ ಯ ಕಾಂತೇಶ ಹಾಗೂ ಇತರ ಪುರಾತನ ದೇವಾಲಯಗಳ ಪರಿಚಯ.

ಇತಿಹಾಸ ಪುಟದಲ್ಲಿ ಕದರಮಂಡಲಗಿಯನ್ನ ಶಾಸನಗಳಲ್ಲಿ ಕದರವುಂಡಲಿಗೆ ಎಂದೇ ಕರೆಯ ಲಾಗಿದೆ. ಇಲ್ಲಿನ ಬನ್ನಿಮಂಟಪವನ್ನು ಗುತ್ತಲ ಪಾಳೇಗಾರರು ನಿರ್ಮಿಸಿದ ಉಲ್ಲೇಖ ನೋಡ ಬಹುದು. ಇಲ್ಲಿ ಹೊಯ್ಸಳರ ಕಾಲದ ರಾಮಲಿಂಗ ದೇವಾಲಯವಿದ್ದು ಕಲ್ಯಾಣ ಚಾಲುಕ್ಯ ನಿರ್ಮಿತ ಮುಕ್ಕಪ್ಪಣ್ಣನಗಡಿ ಇದೆ. ದಾರಿಯಲ್ಲಿ ರಾಷ್ಟ್ರ ಕೂಟರ ಹಾಗೂ ಕಲ್ಯಾಣ ಚಾಲುಕ್ಯರ ಕಾಲದ ವೀರಗಲ್ಲುಗಳು ಹಾಗು ಮಾಸ್ತಿ ಕಲ್ಲುಗಳು ಗಮನ ಸೆಳೆಯುತ್ತದೆ. 1582 ರ ಶಾಸನದಲ್ಲಿ ಸಂತೆಬೆನ್ನೂರಿನ ಕೆಂಗಪ್ಪನಾಯನು ಇಲ್ಲಿನ ಹನುಮಂತ ದೇವರಿಗೆ ದತ್ತಿ ನೀಡಿದ ಉಲ್ಲೇಖ ವಿದೆ. ಊರ ಹೊರಭಾಗದಲ್ಲಿ ಕೆರೆಯ ಹತ್ತಿರ ನೀಲಕಂಠೇಶ್ವರ ದೇವಾಲಯವಿದ್ದು ಇಲ್ಲಿನ ಸನಿಹದ ತಿಮ್ಮಪ್ಪನ ದೇವಾಲಯದಲ್ಲಿ ಕನಕ ದಾಸರು ಮೋಹನತರಂಗಿಣಿ ಕಾವ್ಯ ರಚಿಸಿದರು ಎಂಬ ನಂಬಿಕೆ ಇದೆ. ಅದರ ಪುರಾತನ ಹಸ್ತಪ್ರತಿ ಯೊಂದು ಕಾಂತೇಶ ದೇವಾಲಯದಲ್ಲಿ ಇರಿಸಲಾ ಗಿದೆ.

ಕಾಂತೇಶ ದೇವಾಲಯ

ಮೂರು ತ್ರಿವಳಿ ದೇವಾಲಯಗಳಲ್ಲಿ ಒಂದಾದ ಎರಡೂ ಕಣ್ಣುಗಳಲ್ಲಿ ಸಾಲಿಗ್ರಾಮ ಹೊಂದಿರುವ ಈ ಹನುಮ ಇರುವುದು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನಲ್ಲಿ. ನೂತನವಾಗಿ ನಿರ್ಮಾ ಣಗೊಂಡಿರುವ ವಿಶಾಲವಾದ ದೇವಾಲಯವಿ ರುವ ಇಲ್ಲಿನ ಗರ್ಭಗುಡಿಯಲ್ಲಿ ವಿಜಯ ನಗರ ಕಾಲಕ್ಕೆ ಸೇರಿರಬಹುದಾದ ಹನುಮನ ಶಿಲ್ಪವಿದ್ದು ನೇರವಾಗಿ ನಿಂತಿರುವುದು ವಿಶೇಷ. ದೇವಾಲಯ ಕ್ಕೆ ದೊಡ್ಡದಾದ ರಾಜಗೊಪುರ ವನ್ನ ನಿರ್ಮಿಸಲಾ ಗಿದೆ. ಕನಕದಾಸರಿಂದ ಆರಾಧನೆಗೆ ಒಳಪಟ್ಟಿದ್ದ ಈ ಮೂರ್ತಿಗೆ ಹಲವು ಅರಸರ ಕಾಲದಲ್ಲಿ ದತ್ತಿ ನೀಡಿದ ಉಲ್ಲೇಖವನ್ನು ನೋಡ ಬಹುದು. ಇನ್ನು ಈ ಶಿಲ್ಪ ಹನುಮ, ಭೀಮ ಹಾಗು ಮಧ್ವಾಚಾರ್ಯ ರಂತೆ ಗೊಚರವಾಗುವುದು ವಿಶೇಷ. ದೇವಾಲಯದಲ್ಲಿ ಆವರಣದಲ್ಲಿ ರಾಮನ ಪರಿವಾರದ ಶಿಲ್ಪಗಳನ್ನ ಸ್ಥಾಪಿಸಲಾ ಗಿದೆ. ಈ ಹನುಮನನ್ನ ಜನಮೇಜಯ ರಾಜ ಸ್ಥಾಪಿಸಿದ ಎಂದು ಸ್ಥಳೀಯ ಪುರಾಣಗಳು ಹೇಳುತ್ತದೆ. ಪಕ್ಕದಲ್ಲಿ ಬೃಹತ್ ಕಲ್ಯಾಣಿ ಇದ್ದು ವಿಶಾಲ ವಾದ ಕಲ್ಯಾಣ ಮಂಟಪ ಹಾಗು ಅನ್ನ ದಾಸೋಹ ಇದೆ.

ಕಲ್ಲೇಶ್ವರ ದೇವಾಲಯ

ಊರಿನ ಮಧ್ಯದಲ್ಲಿರುವ ಈ ದೇವಾಲಯ ಗರ್ಭಗುಡಿ, ಅಂತರಾಳ ಹಾಗು ನವರಂಗ ಹೊಂದಿದ್ದು ಗರ್ಭಗುಡಿಯಲ್ಲಿ ಕಲ್ಲೇಶ್ವರ ಎಂದು ಕರೆಯುವ ಶಿವಲಿಂಗವಿದೆ. ಅಂತರಾಳದ ಬಾಗಿಲುವಾಡದ ಜಾಲಂದ್ರಗಳು ಗಮನ ಸೆಳೆ ಯುತ್ತದೆ. ನವರಂಗದಲ್ಲಿ ನಾಲ್ಕು ಕಂಭಗಳಿವೆ. ದೇವಾಲಯ ಮುಂಭಾಗದಲ್ಲಿ ಹೊಸದಾಗಿ ವಿಸ್ತರಿಸಿದ ಮಂಟಪವಿದ್ದು ಇಲ್ಲಿ ಸುಮಾರು 4-5 ಅಡಿ ಎತ್ತರದ ನಂದಿಯನ್ನ ಇರಿಸಲಾಗಿದೆ.

ರಾಮಲಿಂಗೇಶ್ವರ ದೇವಾಲಯ

ಮೂಲತಹ ಹೊಯ್ಸಳ ನಿರ್ಮಿತ ದೇವಾಲಯ ಸಾಕಷ್ಟು ನವೀಕರಣಗೊಂಡಿದ್ದು ಗರ್ಭಗುಡಿ ಹಾಗೂ ಅಂತರಾಳದ ಭಾಗಗಳನ್ನು ಮಾತ್ರ ಹಾಗೆಯೆ ಉಳಿಸಕೊಳ್ಳಲಾಗಿದೆ. ಗರ್ಭಗುಡಿ ಯಲ್ಲಿ ರಾಮಲಿಂಗೇಶ್ವರ ಎಂದು ಕರೆಯುವ ಶಿವಲಿಂಗವಿದೆ.

ನೀಲಕಠೇಶ್ವರ ದೇವಾಲಯ

ಬಹುತೇಕ ನವೀಕರಣಗೊಂಡಿರುವ ಈ ದೇವಾ ಲಯ ಸುಮಾರು 10 – 11ನೇ ಶತಮಾನದ ದೇವಾಲಯ. ಗರ್ಭಗುಡಿಯಲ್ಲಿ ನೀಲಕಂಠೇ ಶ್ವರ ಎಂದು ಕರೆಯುವ ಶಿವಲಿಂಗವಿದೆ. ಶಿವನ ಅಭಿ ಮುಖವಾಗಿ ನಂದಿಯಿದ್ದು ಇಲ್ಲಿ ಸಪ್ತಮಾತೃಕೆಯ ಫಲಕ ಇದೆ. ಇಲ್ಲಿ ಸನಿಹದಲ್ಲಿ ಇದ್ದ ತಿಮ್ಮಪ್ಪನ (ಈಗ ಸಂಪೂರ್ಣ ನವೀಕರಣಗೊಂಡಿದೆ) ದೇವಾಲಯದಲ್ಲಿ ಕನಕದಾಸರು ಮೋಹನ ತರಂಗಿಣಿ ಕಾವ್ಯ ರಚಿಸಿದರು ಎನ್ನಲಾಗಿದೆ.

ತಲುಪವ ಬಗ್ಗೆ : ರಾಣಿಬೆನ್ನೂರನಿಂದ ಸುಮಾರು 14 ಕಿ.ಮೀ ದೂರದಲ್ಲಿದ್ದು ಬ್ಯಾಡಗಿ ರಸ್ತೆಯ ಮೂಲಕ ಹೋಗಬಹುದು.

✍️ಶ್ರೀನಿವಾಸಮೂರ್ತಿ ಎನ್.ಎಸ್.
ಬೆಂಗಳೂರು