ಅವನು ಬ್ರಿಲಿಯಂಟ್ ಸೈಕೊ ಕಾಮಿ!!
ಪ್ರೀತಿಸಿದ, ಕಾಮಿಸಿದ ಕೊಲೆಗೈದ!
ದೇಹ ಚೂರು ಚೂರು ತುಂಡು ಮಾಡಿದ!!
ಬಯಲಿನಲ್ಲಿ ಕಸವನ್ನೆಸೆದಂತೆ ಪ್ರೀತಿಯನ್ನು ಚಲ್ಲಾಡಿದ!

ರುಂಡವನ್ನು ತನ್ನಲ್ಲಿಸಿಕೊಂಡ ಮುದ್ದಾಡಲು ಜಗಳವಾಡಲು!!

ಒಂದು ದಿನ ಎರಡು ದಿನ
ಮೂರು ದಿನ ಕಳೆಯಿತು. ಅದು ಕೊಳೆಯಿತು. ಬಿಸಾಕಿದ!!!

ಮೌನವಾಗಿದ್ದ. ಒಳಗೆ ಕೊತಕೊತನೆ ಕುದಿಯುತ್ತಿದ್ದ ಧಗಧಗದನೆ ಉರಿಯುತ್ತಿದ್ದ
ಮುಖದಲ್ಲಿ ಹುಸಿನಗೆ ತಾಂಡವತೆ.

ಪ್ರೀತಿ ತುಂಡಾಗಿ ಚೂರು ಚೂರಾಗಿದೆ
ಮನುಷ್ಯರು ಬೀಕರ ಮೌನದಲ್ಲಿದ್ದಾರೆ!!!

ಸುಳುಹಿಗಾಗಿ ಹುಡುಕಾಡುತ್ತಿದ್ದಾರೆ ಆರಕ್ಷಕರು.

ರಕ್ಕಸನು ಅವರ ಜೊತೆಯೇ ಇದ್ದಾನೆ. ಇನ್ನೂ ಬದುಕಿದ್ದಾನೆ….!!!

✍️ಸುರೇಶ ಮುದ್ದಾರ
ಮದವಾಲ
ತಾ:ಗೋಕಾಕ ಜಿ:ಬೆಳಗಾವಿ