ಗಾನಶಾರದೆಗೆ ನಮಿಸುತ
ಉಸಿರ ಪೂಜೆ ಅನವರತ
ಸಂಗೀತವೇ ಅಮ್ಮನಾದರೆ
ಸ್ವರದ ಕೂಸು ನಾನಲ್ಲವೇ

ತಾಳದ ಅಲೆಯ ಸೊಬಗಲಿ
ಬೀಸುರಾಗ ಗಾಳಿ ಸೊಗಡಲಿ
ನೀನು ಭಾವಶರಧಿ ಆಲಯ
ಮಮತೆಯ ಲಯ ನಾನಲ್ಲವೇ

ಆತ್ಮಗುಡಿಯ ಒಳಗೆ
ಜ್ಯೋತಿ ನಿನ್ನ ಕಾಣದೆ
ನಿರಾಕಾರ ಚೇತನವೇ
ಸ್ಪೂರ್ತಿ ನೀನೆ ಅಲ್ಲವೇ

✍️ ಕಾವ್ಯ ಸುತ
(ಷಣ್ಮುಗಂ ವಿವೇಕಾನಂದ)
ಧಾರವಾಡ